ಜಿಂಬಾಬ್ವೆ ಕ್ರಿಕೆಟ್ ತಂಡ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‍ನಲ್ಲಿ ಇದುವರೆಗೂ ಯಾರೂ ಮಾಡದ ಸಾಧನೆ ಮಾಡಿದೆ. ಟಿ20 ವಿಶ್ವಕಪ್ ಉಪ-ಪ್ರಾದೇಶಿಕ ಆಫ್ರಿಕಾ ಅರ್ಹತಾ ಪಂದ್ಯಾವಳಿಯಲ್ಲಿ ಬುಧವಾರ ಗ್ಯಾಂಬಿಯಾ ವಿರುದ್ಧ ಪಂದ್ಯದಲ್ಲಿ ಜಿಂಬಾಬ್ವೆ 344 ರನ್‍ಗಳನ್ನು ಕಲೆಹಾಕಿದೆ. ಇದರೊಂದಿಗೆ ಟಿ-20 ಇತಿಹಾಸದಲ್ಲೆ ಅತಿ ಹೆಚ್ಚು ರನ್ ಗಳಿಸಿದ ತಂಡವಾಗಿ ವಿಶ್ವ ದಾಖಲೆ ಬರೆದಿದೆ.
ಜಿಂಬಾಬ್ವೆ ತಂಡದ ಪರ ಸಿಕಂದರ್ ರಜಾ ಕೇವಲ 43 ಎಸೆತಗಳಲ್ಲಿ 133 ರನ್ ಬಾರಿಸಿದರು. ಇದರಲ್ಲಿ 15 ಸಿಕ್ಸರ್‍ಗಳು ಸೇರಿವೆ. ಗ್ಯಾಂಬಿಯನ್ ಪರ ಬೌಲಿಂಗ್‍ನಲ್ಲಿ ಮೂಸಾ ಜೊಬರೆತ್ ನಾಲ್ಕು ಓವರ್‌ಗಳಲ್ಲಿ 93 ರನ್ ಬಿಟ್ಟುಕೊಟ್ಟರು. ಆಂಡ್ರಿ 2, ಅರ್ಜುನ್ ಸಿಂಗ್ ಮತ್ತು ಬುಬಾಕರ್ ತಲಾ 1 ವಿಕೆಟ್ ಪಡೆದರು. ಈ ದೊಡ್ಡ ಗುರಿ ಬೆನ್ನಟ್ಟಿದ ಗ್ಯಾಂಬಿಯಾ 14.4 ಓವರ್‌ಗಳಲ್ಲಿ 54 ರನ್‍ಗಳಿಗೆ ಸರ್ವಪತನ ಕಂಡಿತು. ಗ್ಯಾಂಬಿಯಾ ಪರ ಆಂಡ್ರೆ ಹೊರತುಪಡಿಸಿ ಯಾರೋಬ್ಬರು ಕೂಡ ಬ್ಯಾಟರ್‌ಗಳು ಎರಡಂಕಿ ದಾಟಲು ಸಾಧ್ಯವಾಗಲಿಲ್ಲ. ಇದರೊಂದಿಗೆ ಜಿಂಬಾಬ್ವೆ 290 ರನ್‍ಗಳ ಜಯ ಸಾಧಿಸಿತು. ಇದು ಟಿ20ಯಲ್ಲಿ ಜಿಂಬಾಬ್ವೆ ತಂಡ ದೊಡ್ಡ ಅಂತರದ ಗೆಲುವು ಸಾಧಿಸಿದೆ. ಈ ದಾಖಲೆಗೂ ಮುನ್ನ ವಿಶ್ವದಾಖಲೆ ನೇಪಾಳದ ಹೆಸರಿನಲ್ಲಿತ್ತು. ಆದರೆ ಈಗ ಜಿಂಬಾಬ್ವೆ ತಂಡ ನೇಪಾಳದ ದಾಖಲೆಯನ್ನು ಹಿಮ್ಮೇಟ್ಟಿದೆ. ಜಿಂಬಾಬ್ವೆ ಬೌಲರ್‍ಗಳ ಪೈಕಿ ರಿಚರ್ಡ್ ನಗರವ 3, ಬ್ರ್ಯಾಂಡನ್ ಮಾವ್ಟಾ 3, ವೆಸ್ಲಿ ಮದ್ವೀರ 2, ರಿಯಾನ್ ಬರ್ಲ್ ಒಂದು ವಿಕೆಟ್ ಪಡೆದರು.










