ಅಂತಿಮ ದಿನದ ಪಾದೆಯಾತ್ರೆಯಲ್ಲಿ ಸರ್ವರಿಗೂ ಹೆಜ್ಜೆ ಹಾಕುವ ಅವಕಾಶ : ಡಿ.ಕೆ.ಶಿವಕುಮಾರ್.

66
firstsuddi

ಬೆಂಗಳೂರು : ಮೇಕೆದಾಟು ಯೋಜನೆಗೆ ಆಗ್ರಹಿಸಿ ನಡೆಯುತ್ತಿರುವ ಪಾದಯಾತ್ರೆಯಲ್ಲಿ ಸರ್ವ ಜನ, ಸರ್ವಪಕ್ಷಗಳಿಗೆ ಹೆಜ್ಜೆ ಹಾಕಲು ಕಾಂಗ್ರೆಸ್ ಅವಕಾಶ ಕೊಟ್ಟಿದೆ. ರಾಜ್ಯದ ಮೂಲೆಮೂಲೆಯಿಂದ ಜನರು ಬರುತ್ತಿದ್ದಾರೆ. ನಾಳೆ ಅಂತಿಮ ದಿನದ ಪಾದಯಾತ್ರೆ ಇದ್ದು, ನ್ಯಾಷನಲ್ ಕಾಲೇಜಿನಲ್ಲಿ ಮುಕ್ತಾಯವಾಗಲಿದೆ. ಎಲ್ಲ ವರ್ಗದ ಜನರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದರು.

ನಗರದ ಬಿಬಿಎಂಪಿ ಕ್ರೀಡಾಂಗಣದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು , ಅಂತಿಮ ದಿನದ ಪಾದಯಾತ್ರೆಯಲ್ಲಿನ ಹೆಜ್ಜೆಗೆ ಬಹಳ ಬೆಲೆ. ಇದಕ್ಕೆ ಹೆಜ್ಜೆ ಹಾಕಿದರೆ ಇತಿಹಾಸ ಪುಟ ಸೇರುತ್ತೆ. ಎಲ್ಲ ಜನರು ಭಾಗವಹಿಸಬೇಕು. ಎಲ್ಲರಿಗೂ ಒಂದು ಭಾಗ್ಯ ಸಿಗಲಿದೆ. ಹೋರಾಟದಲ್ಲಿ ಎಲ್ಲ ಸಂಘಟನೆಗಳು ಭಾಗವಹಿಸುವ ಮೂಲಕ ಪಾದಯಾತ್ರೆ ಯಶಸ್ವಿಗೊಳಿಸಬೇಕೆಂದು ಡಿಕೆಶಿ ಮನವಿ ಮಾಡಿದರು.

ಯುದ್ಧ ಪೀಡಿತ ಉಕ್ರೇನ್ ನಲ್ಲಿ ನಿನ್ನೆ ರಾಜ್ಯದ ವಿದ್ಯಾರ್ಥಿ ನವೀನ್ ಮೃತಪಟ್ಟಿದ್ದಾನೆ. ನವೀನ್ ಸಾವು ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಅವರ ಮನೆಯವರ ಕ್ಷಮೆ ಕೇಳಬೇಕು. ನಾವು ಕೂಡ ಪಾದಯಾತ್ರೆ ಮುಗಿದ ಬಳಿಕ ಕುಟುಂಬಸ್ಥರ ಭೇಟಿ ಮಾಡಿ ಸಾಂತ್ವನ ಹೇಳುತ್ತೇವೆ ಎಂದರು.

ನಗರದಲ್ಲಿ ಕಾಂಗ್ರೆಸ್ ಪಕ್ಷದ ಎರಡನೇ ದಿನದ ಪಾದಯಾತ್ರೆ ಆರಂಭಗೊಂಡಿದ್ದು, ಇಂದು ಬಿಟಿಎಂ ಲೇಔಟ್ ಅದ್ವೈತ ಪೆಟ್ರೋಲ್ ಬಂಕ್ ನಿಂದ ಆರಂಭವಾಗಿರುವ ಪಾದಯಾತ್ರೆ ಸಂಜೆ ಅರಮನೆ ಮೈದಾನ ತಲುಪಲಿದೆ.