ಉಡುಪಿ : ಕೇರಳ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಮತ್ತು ಸ್ಕೂಟರ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ತಂದೆ ಮತ್ತು ಮಗಳು ದಾರುಣವಾಗಿ ಮೃತಪಟ್ಟ ಘಟನೆ ಇಂದು ಬೆಳಗ್ಗೆ ಸಂತೆಕಟ್ಟೆ ಜಂಕ್ಷನ್ ನಲ್ಲಿ ಸಂಭವಿಸಿದೆ.
ಮೃತರನ್ನು ಗರಡಿಮಜಲು ನಿವಾಸಿಗಳಾದ ಗಣೇಶ್ ಪೈ (58) ಮತ್ತ ಅವರ ಮಗಳು ಗಾಯತ್ರಿ ಪೈ ಎಂದು ಗುರುತಿಸಲಾಗಿದೆ. ಪ್ರಾಥಮಿಕ ಮಾಹಿತಿಗಳ ಪ್ರಕಾರ ಗಣೇಶ್ ಪೈ ಅವರು ಹುಬ್ಬಳಿಯಿಂದ ಆಗಮಿಸಿದ್ದ ತನ್ನ ಮಗಳು ಗಾಯತ್ರಿ ಪೈ ಅವರನ್ನು ಕರೆದುಕೊಂಡು ಹೋಗಲು ಸ್ಕೂಟರ್ ನಲ್ಲಿ ಬಂದಿದ್ದರು. ಆಕೆಯನ್ನು ಕರೆದುಕೊಂಡು ಸಂತೆಕಟ್ಟೆ ಜಂಕ್ಷನ್ ಬಳಿ ರಸ್ತೆ ದಾಟುತ್ತಿದ್ದಾಗ ಕೇರಳದಿಂದ ಕೊಲ್ಲೂರು ಕಡೆಗೆ ಸಾಗುತ್ತಿದ್ದ ಬಸ್ಸು ಡಿಕ್ಕಿ ಹೊಡೆದಿದ್ದು ಮಗಳು ಸ್ಥಳದಲ್ಲೇ ಮೃತಪಟ್ಟರೆ, ಗಣೇಶ್ ಪೈ ಅವರು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ಉಡುಪಿ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.










