ಅಕ್ರಮ ಸಂಬಂಧಕ್ಕೆ ಅಡ್ಡಿ ಎಂದು ಹೆತ್ತ ಮಗುವನ್ನೇ ನದಿಗೆ ಎಸೆದ ಪಾಪಿ ತಾಯಿ…

61
firstsuddi

ರಾಮನಗರ: ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿ ಎಂದು ಭಾವಿಸಿ ಮಹಿಳೆಯೊಬ್ಬರು ತನ್ನ ಒಂದೂವರೆ ವರ್ಷದ ಮಗುವನ್ನು ನದಿಗೆ ಎಸೆದ ಘಟನೆ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕಾಲಿಕೆರೆ ಗ್ರಾಮದಲ್ಲಿ ನಡೆದಿದೆ.

ಭಾಗ್ಯಾ ಹೆತ್ತ ಮಗುವನ್ನು ನದಿಗೆ ಎಸೆದ ತಾಯಿ. ಕಳೆದ 2 ವರ್ಷದಿಂದ ಭಾಗ್ಯಾ, ತಾಯಿ ಮನೆಯಲ್ಲೇ ವಾಸವಿದ್ದಳು. ಭಾಗ್ಯಾ ಹಾಗೂ ಶ್ರೀನಿವಾಸ್ ದಂಪತಿಯ 1 ವರ್ಷ 6 ತಿಂಗಳ ಹಸುಗೂಸನ್ನು ಭಾಗ್ಯಾ ನಿನ್ನೆ ರಾತ್ರಿ ಕೊಂಡಾಪುರ ಬಳಿಯ ಕಣ್ವ ನದಿಗೆ ಎಸೆದಿದ್ದಾಳೆ. ಇಂದು ಬೆಳಗ್ಗೆ ಕುಟುಂಬಸ್ಥರು ಮಗು ಎಲ್ಲಿ ಎಂದು ಕೇಳಿದಾಗ ನದಿಗೆ ಎಸೆದಿರುವುದಾಗಿ ಭಾಗ್ಯಾ ಹೇಳಿದ್ದಾಳೆ. ಗ್ರಾಮಸ್ಥರು ನದಿಯಿಂದ ಮೃತ ಮಗುವಿನ ಶವ ಹೊರತೆಗೆದಿದ್ದಾರೆ.

ಪೊಲೀಸರ ಪ್ರಕಾರ, ಭಾಗ್ಯಾ ತನ್ನ ಪತಿಯನ್ನು ತೊರೆದು ತನ್ನ ಮಗ ದೇವರಾಜ್ (1.3 ವರ್ಷ) ನೊಂದಿಗೆ ಪೋಷಕರೊಂದಿಗೆ ವಾಸಿಸುತ್ತಿದ್ದಳು. ಆಕೆ ವ್ಯಕ್ತಿಯೊಬ್ಬರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಇದಕ್ಕೆ ಆಕೆಯ ತಾಯಿ ಕೂಡ ವಿರೋಧಿಸಿದ್ದರು. ಭಾಗ್ಯಾ ತನ್ನ ಮಗುವನ್ನು ಮನೆಯಲ್ಲಿ ಬಿಟ್ಟು, ತನ್ನ ಸಂಗಾತಿಯೊಂದಿಗೆ ಹೊರಗೆ ಹೋಗುತ್ತಿದ್ದದ್ದರ ಬಗ್ಗೆ ಟೀಕಿಸಿದ್ದಾರೆ. ಆಕೆಯ ಸಂಗಾತಿಯೂ ಮಗನನ್ನು ಇಷ್ಟಪಡುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.

ಇದರಿಂದ ನಿನ್ನೆ ರಾತ್ರಿ ಬಟ್ಟೆ ಒಗೆಯುವ ನೆಪದಲ್ಲಿ ಕಣ್ವ ನದಿಯ ಬಳಿ ತನ್ನ ಮಗುವನ್ನು ಕರೆದೊಯ್ದು ನೀರಿಗೆ ಎಸೆದಿದ್ದಾರೆ. ತನ್ನ ಮಗ ಆಕಸ್ಮಿಕವಾಗಿ ನದಿಗೆ ಬಿದ್ದಿದ್ದಾನೆ ಎಂದು ಬಿಂಬಿಸಲು ಯತ್ನಿಸಿದ್ದಾಳೆ. ವಿಚಾರಣೆ ಬಳಿಕ ಭಾಗ್ಯಾ ತನ್ನ ಸಂಬಂಧದ ಹಿನ್ನಲೆಯಲ್ಲಿ ಈ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾಳೆ.

ಈ ಕುರಿತು ಅಕ್ಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.