ಬೆಂಗಳೂರು ಗ್ರಾಮಾಂತರ: ಅತ್ತಿಗೆಯ ಕಿರುಕುಳಕ್ಕೆ ಬೇಸತ್ತು ಮನೆಯ ಕೊಠಡಿಯಲ್ಲಿ ನೇಣುಬಿಗಿದುಕೊಂಡು ಮೈದುನ ಆತ್ಮಹತ್ಯೆ ಮಾಡಿಕೊಂಡ ಘಟನೆ ನೆಲಮಂಗಲದ ಅರಿಶಿನಕುಂಟೆಯಲ್ಲಿ ನಡೆದಿದೆ.
ನಾಗರಾಜು(35) ಮೃತ ರ್ದುದೈವಿ. ಇನ್ನು ಘಟನೆ ಕುರಿತು ಸೊಸೆ ಭಾಗ್ಯಮ್ಮ ವಿರುದ್ಧ ಮೃತನ ತಂದೆ-ತಾಯಿ ನೆಲಮಂಗಲ ಟೌನ್ ಪೊಲೀಸ್ ಠಾಣೆಗೆ ಕಿರುಕುಳದ ದೂರು ನೀಡಿದ್ದಾರೆ.
ಎರಡು ವರ್ಷದ ಹಿಂದೆ ಅರಿಶಿನಕುಂಟೆಯಲ್ಲಿ ಮನೆ ಕಟ್ಟಿಸುವಾಗ ಮೇಸ್ತ್ರಿಯಾಗಿ ಬಂದಿದ್ದ ಅಣ್ಣ ದಿಲೀಪ್ ಜೊತೆ ಸಲುಗೆಯಿಂದ ಇದ್ದ ಅತ್ತಿಗೆಯನ್ನ ಮೃತ ನಾಗರಾಜ್ ಪ್ರಶ್ನೆ ಮಾಡಿದ್ದ. ಈ ವಿಷಯವಾಗಿ ಮನೆ ಬಿಟ್ಟು ಹೋಗುವಂತೆ ದಂಡ ಪಿಂಡ ಎಂದು ಭಾಗ್ಯಮ್ಮ ಹೀಯಾಳಿಸಿದ್ದಳು. ಇದರಿಂದ ಮನನೊಂದ ನಾಗರಾಜು, ವೇಲ್ ಬಳಸಿ ರೂಂನ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸಾವಿಗೆ ಕಾರಣರಾದ ಭಾಗ್ಯಮ್ಮ ಹಾಗೂ ದಿಲೀಪ್ ವಿರುದ್ಧ ದೂರು ದಾಖಲಾಗಿದ್ದು, ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.










