ಚೀಟಿ ಹೆಸರಿನಲ್ಲಿ ಹಣ ಪಡೆದು ವಂಚನೆ ಆರೋಪ: ದಂಪತಿ ಪೊಲೀಸ್ ವಶಕ್ಕೆ…

44
firstsuddi

ಬೆಂಗಳೂರು: ಚೀಟಿ ಹೆಸರಿನಲ್ಲಿ ಹಣ ಪಡೆದು ವಂಚಿಸಿರುವ ಆರೋಪದಡಿ ದಂಪತಿಯನ್ನು ಬ್ಯಾಡರಹಳ್ಳಿ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರಕೃತಿನಗರದಲ್ಲಿ ಕೆಲವು ವರ್ಷಗಳಿಂದ ಶ್ರೀ ಸಾಯಿಲಕ್ಷ್ಮೀ ಕೃಪೆ ಚಿಟ್ (ರಿ) ಹೆಸರಿನಲ್ಲಿ ಆರೋಪಿ ದಂಪತಿ ಚೀಟಿ ನಡೆಸುತ್ತಿದ್ದರು. ಇತ್ತೀಚಿಗೆ ಚೀಟಿ ಹಣ ನೀಡದೇ ನಾಪತ್ತೆಯಾಗಿದ್ದು, ಬ್ಯಾಡರಹಳ್ಳಿ ಠಾಣೆಗೆ ದೂರುಗಳು ಬಂದಿದ್ದವು.

ದೂರುಗಳ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ವಂಚನೆಗೊಳಗಾಗಿರುವ ನೂರಾರು ಜನ ಠಾಣೆಯೆದುರು ಜಮಾಯಿಸಿದ್ದರು. ಇದೀಗ ಪೊಲೀಸರು ಆರೋಪಿ ದಂಪತಿಯ ವಿಚಾರಣೆ ನಡೆಸುತ್ತಿದ್ದಾರೆ.