ಅತ್ಯಾಚಾರ ಪ್ರಕರಣ ತಡೆಯಲು ಕಾನೂನು ಬಿಗಿಯಾಗಬೇಕು : ವಿನಯ್ ಗುರೂಜಿ.

99
firstsuddi

ರಾಯಚೂರು : ಜಿಲ್ಲೆಯಲ್ಲಿ ಮೈಸೂರಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ಕುರಿತು ಮಾತನಾಡಿದ ವಿನಯ್ ಗುರೂಜಿ ಅವರು, ಹೆಣ್ಣುಮಕ್ಕಳ ಬಗ್ಗೆ ಹೆಚ್ಚಿನ ಮಟ್ಟದ ಜಾಗೃತಿ ಅಗತ್ಯವಿದೆ. ಸರ್ಕಾರ ಕಾನೂನುಗಳನ್ನು ಬಿಗಿ ಮಾಡಬೇಕಾಗಿದೆ. ಸಂದರ್ಭಗಳು ಹೀಗೆ ಬರುತ್ತೆ ಅಂತ ಯಾರಿಗೂ ಕನಸು ಬೀಳುವುದಿಲ್ಲ. ನಮ್ಮ ಕಾನೂನಿನಲ್ಲಿ ಒಳಗೆ ಹೋಗಲು ದಾರಿ ಇದೆ. ಬಚಾವ್ ಆಗಿ ಹೊರಗೆ ಬರಲು ಕಾನೂನು ಇದೆ. ಕಳ್ಳತನ ಮಾಡುವನು ಪೊಲೀಸರಿಗಿಂತ ಬುದ್ಧಿವಂತ ಇರುತ್ತಾನೆ. ಒಳಗೆ ಹೋಗುವ ಮುನ್ನವೇ ಹೊರಗಡೆ ಬರಲು ಎಲ್ಲಾ ದಾರಿಗಳನ್ನ ಕಂಡು ಕೊಂಡಿರುತ್ತಾನೆ. ಅತ್ಯಾಚಾರ ಪ್ರಕರಣ ತಡೆಯಲು ಕಾನೂನುಗಳು ಬಿಗಿಯಾಗಬೇಕು. ಅತ್ಯಾಚಾರಿಗಳಿಗೆ ಸರಿಯಾದ ಶಿಕ್ಷೆಯಾಗಬೇಕು ಎಂದು ಹೇಳಿದ್ದಾರೆ.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ದಾಳಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಗುರೂಜಿ, ಅಫ್ಘಾನಿಸ್ತಾನ ಸಹಾಯಕ್ಕೆ ಎಲ್ಲಾ ದೇಶಗಳು ಬರಬೇಕು. ತಾಲಿಬಾನ್ ಅನ್ನು ಮಟ್ಟ ಹಾಕಬೇಕಾಗಿದೆ. ಈಗ ಅಫ್ಘಾನಿಸ್ತಾನದಲ್ಲಿ ದಾಳಿ ಮಾಡಿದವರು ಮುಂದೆ ದೆಹಲಿಗೂ ಬರಬಹುದು. ಚೀನಾ ಮತ್ತು ಪಾಕಿಸ್ತಾನದವರು ಭಾರತಕ್ಕೆ ನುಗ್ಗಲು ಯತ್ನಿಸುತ್ತಿದ್ದಾರೆ. ಇದು ಹೀಗೆ ಮುಂದವರಿದರೆ ಯುದ್ಧವಾಗುವ ಅವಕಾಶ ಇರಬಹುದು ಎಂದರು.