ವಾರಾಣಸಿಯ ಪ್ರಾಥಮಿಕ ಶಾಲೆಯೊಂದರ ಬಳಿ ಗೋಣಿ ಚೀಲದಲ್ಲಿ ಎಂಟು ವರ್ಷದ ಬಾಲಕಿಯ ಅರೆಬೆತ್ತಲೆ ಶವ ಪತ್ತೆಯಾಗಿದೆ. ಅತ್ಯಾಚಾರವನ್ನು ವಿರೋಧಿಸಿದ್ದಕ್ಕೆ ಆರೋಪಿ ಬಾಲಕಿಯನ್ನು ಕೊಲೆ ಮಾಡಿ, ಗೋಣಿಚೀಲದಲ್ಲಿ ತುಂಬಿ ಎಸೆದು ಪರಾರಿಯಾಗಿದ್ದ. ಸಂತ್ರಸ್ತೆಯ ನೆರೆಹೊರೆಯವರಾದ ಆರೋಪಿ ಇರ್ಷಾದ್ ನನ್ನು ಪೊಲೀಸರು ಕೆಲಕಾಲ ಗುಂಡು ಹಾರಿಸಿ ಬಂಧಿಸಲಾಗಿದೆ. ಆತನ ಮೇಲೆ ಅತ್ಯಾಚಾರ ಮತ್ತು ಹತ್ಯೆ ಆರೋಪವನ್ನು ಹೊರಿಸಲಾಗಿದ್ದು, ಸುಜಾಬಾದ್ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ಅಪ್ರಾಪ್ತ ಬಾಲಕಿಯ ಶವ ಮಂಗಳವಾರ ಬಹದ್ದೂರ್‍ಪುರ ಪ್ರಾಥಮಿಕ ಶಾಲೆಯ ಗಡಿ ಗೋಡೆಯ ಬಳಿ ಪತ್ತೆಯಾಗಿದ್ದು, ಬಾಲಕಿಯ ದೇಹದಾದ್ಯಂತ ರಕ್ತದ ಕಲೆಗಳು, ಮೂಗೇಟಿನ ಗುರುತುಗಳು ಕಾಣಿಸಿವೆ. ಸಿಸಿಟಿವಿ ದೃಶ್ಯಾವಳಿಯನ್ನು ಆಧರಿಸಿ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ಇರ್ಷಾದ್ ಬಾಲಕಿಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಸ್ವಲ್ಪ ಸಮಯದ ನಂತರ ಗೋಣಿಚೀಲವನ್ನು ಹಿಡಿದು ಹೊರಗೆ ಬರುತ್ತಿರುವುದು ಕಂಡುಬಂದಿದೆ. ಬಾಲಕಿಯ ಮೇಲೆ ಅತ್ಯಾಚಾರ ಎಸಗುವ ಯತ್ನವನ್ನು ವಿರೋಧಿಸಿದ್ದಕ್ಕೆ ಇರ್ಷಾದ್ ಬಾಲಕಿಯನ್ನು ಕಲ್ಲಿನಿಂದ ಕೊಂದು ಹಾಕಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಾಲಕಿಯ ತಂದೆ ದಿವ್ಯಾಂಗರಾಗಿದ್ದು, ಆಟೋ ಚಾಲನೆ ಮಾಡಿ ಜೀವನ ನಡೆಸುತ್ತಿದ್ದರು. ಬಾಲಕಿ ಸಂಜೆ 6.30ರ ಸುಮಾರಿಗೆ ಹತ್ತಿರದ ಅಂಗಡಿಗೆ ಹೋಗಿದ್ದಳು. ಆಕೆ ಮನೆಗೆ ಬಾರದೇ ಇದ್ದಾಗ ಮನೆಯವರು ಹುಡುಕಲು ಶುರುಮಾಡಿದ್ದರು. ಎಷ್ಟೇ ಹುಡುಕಿದರೂ ಸಿಗದೆ ಇದ್ದಾಗ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ ಎಂಬುದು ತಿಳಿದುಬಂದಿದೆ.










