ಅಪ್ರಾಪ್ತೆ ಮೇಲೆ ಪ್ರಿಯಕರನಿಂದಲೇ ಅತ್ಯಾಚಾರ…

65
firstsuddi

ಹುಬ್ಬಳ್ಳಿ : ಅಪ್ತಾಪ್ತೆ ಮೇಲೆ ಪ್ರಿಯಕರನೇ ಅತ್ಯಾಚಾರವೆಸಗಿರುವ ಘಟನೆ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ತಾಲೂಕಿನ ಗಿರಿಯಾಲ ಗ್ರಾಮದ 17 ವರ್ಷದ ಅಪ್ರಾಪ್ತೆಯನ್ನು ಪ್ರೀತಿಸುತ್ತಿದ್ದ ಶ್ರೀನಾಥ ನಾಗಣ್ಣವರ ಎಂಬಾತ ಆಕೆಯನ್ನು ಪುಸಲಾಯಿಸಿ ಜನವರಿ 10 ರಂದು ಮಧ್ಯಾಹ್ನ ನೇಕಾರ ನಗರ ಸೇತುವೆ ಸಮೀಪ ಕರೆಸಿಕೊಂಡಿದ್ದ. ಬಳಿಕ ಕಲಘಟಗಿಯ ಅರಣ್ಯ ಪ್ರದೇಶಕ್ಕೆ ಕರೆದೊಯ್ದು, ಆಕೆ ವಿರೋಧ ವ್ಯಕ್ತಪಡಿಸಿದರೂ ಒತ್ತಾಯಪೂರ್ವಕವಾಗಿ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆಯ ತಾಯಿ ದೂರಿನಲ್ಲಿ ಆರೋಪಿಸಿದ್ದಾರೆ.

ಈ ಸಂಬಂಧ ಕಸಬಾಪೇಟ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.