ಬೆಳಗಾವಿ : ರಾಜ್ಯಕ್ಕೆ ಅಮಿತ್ ಶಾ ಬರುತ್ತಾರೆ ಎಂದು ಅಧಿವೇಶನವನ್ನು ನಿಲ್ಲಿಸಿದ್ರೆ ಹೇಗೆ? ಎಂದು ಬಿಜೆಪಿ ಸರ್ಕಾರ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನೊಂದು ವಾರ ಅಧಿವೇಶನ ಮಾಡೋಕೆ ಹೇಳಿ ಅಮಿತ್ ಶಾ ಬರುತ್ತಾನೆ ಎಂದು ಬಿಜೆಪಿ ನಾಯಕರು ಹೋಗ್ತಾರೆ. ಅವರು ಬಂದ್ರು ಅಂದ್ರೆ ಅಧಿವೇಶನ ಮಾಡೋಕೇನು?. ನಾನು ವಿಜಯಪುರ ಸಮಾವೇಶಕ್ಕೆ ಹೋಗ್ತೇನೋ ಬಿಡ್ತೇನೋ? ಆದರೆ ಇವರು ಅಮಿತ್ ಶಾ ಬರ್ತಾನೆ ಅಂತ ನಿಲ್ಲಿಸಿದ್ರೆ ಹೇಗೆ? ಎಂದರು.
ಈ ಬಾರಿಯ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಚರ್ಚೆಗೆ ಅವಕಾಶವಿಲ್ಲ. ಕಬ್ಬು ಬೆಳೆಗಾರರು, ಭತ್ತ ಬೆಳೆಗಾರರ ಬಗ್ಗೆ ಚರ್ಚೆಯಾಗಬೇಕು. ಸ್ಪೀಕರ್ ಎರಡು ದಿನ ಚರ್ಚೆ ಮಾಡೋಣ ಎಂದಿದ್ದರು. ಅವರು ಚರ್ಚೆಗೆ ಬರಲೇ ಇಲ್ಲ. ನಾವು ಅಖಂಡ ಕರ್ನಾಟಕದ ಚರ್ಚೆ ಮಾತನಾಡಿದ್ದೆವು ಎಂದರು.
ಬಿಜೆಪಿಯವರು ಉತ್ತರ ಕರ್ನಾಟಕ ಬಗ್ಗೆ ಬಹಳ ಮಾತನಾಡ್ತಾರೆ. ಅದೆಂತದ್ದೋ ಪಾದಯಾತ್ರೆ ಮಾಡಿದ್ರು. ಯಾವ ಭಾಗದ ರೈತರೇ ಆಗಲಿ ಅವರು ರೈತರೆ. ಅದಕ್ಕೋಸ್ಕರ ನಿನ್ನೆ ರೈತರ ಸಮಸ್ಯೆ ಚರ್ಚೆ ಮಾಡಿದ್ದು. ಇದರ ಪರಿಹಾರಕ್ಕೆ ಹೆಚ್ಚಿನ ಹಣ ಬಿಡುಗಡೆ ಮಾಡಲಿ ಎಂದು ಒತ್ತಾಯಿಸಿದರು.










