ವಾಷ್ಟಿಂಗನ್: ಅಮೆರಿಕಕ್ಕೆ ಹಾನಿಯನ್ನುಂಟು ಮಾಡುವ ಹೊರ ದೇಶಗಳ ಮೇಲೆ ಸುಂಕವನ್ನು ವಿಧಿಸುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಭಾರತ, ಚೀನಾ ಮತ್ತು ಬ್ರೆಜಿಲ್‍ಗಳನ್ನು ಹೆಚ್ಚು ಸುಂಕದ ದೇಶಗಳೆಂದು ಅವರು ಹೆಸರಿಸಿದ್ದಾರೆ. 2ನೇ ಬಾರಿಗೆ ಅಮೆರಿಕದ ಅಧ್ಯಕ್ಷರಾದ ನಂತರ ಸೋಮವಾರ ಫ್ಲೋರಿಡಾದ ರಿಟ್ರೀಟ್‌ನಲ್ಲಿ ಮಾಧ್ಯಮಗಾರರೊಂದಿಗೆ ಮಾತನಾಡಿದ ಡೊನಾಲ್ಡ್ ಟ್ರಂಪ್, ನಮಗೆ ನಿಜವಾಗಿಯೂ ಹಾನಿಕಾರವಾಗಿರುವ ಹೊರಗಿನ ದೇಶಗಳು ಮತ್ತು ಜನರ ಮೇಲೆ ಸುಂಕವನ್ನು ಹಾಕಲಿದ್ದೇವೆ. ಅವರು ಹಾನಿಯಾಗಿದ್ದರೂ ಮೂಲತಃ ತಮ್ಮ ದೇಶವನ್ನು ಉತ್ತಮಗೊಳಿಸಲು ಬಯಸುತ್ತಾರೆ ಎಂದು ಹೇಳಿದರು. ಇತರ ರಾಷ್ಟ್ರಗಳು ಏನು ಮಾಡುತ್ತಾರೆ ಎಂಬುದನ್ನು ನೋಡಿ. ಚೀನಾ ಮೊದಲ ಸುಂಕ ಹೆಚ್ಚಳದ ರಾಷ್ಟ್ರವಾಗಿದೆ. ಬಳಿಕ ಭಾರತ, ಬ್ರೆಜಿಲ್ ಸೇರಿದಂತೆ ಇತರ ಹಲವು ದೇಶಗಳಿವೆ. ನಮಗೆ ಅಮೆರಿಕ ಮೊದಲ ಆದ್ಯತೆಯಾಗಿರುವುದರಿಂದ ಅಂತಹ ದೇಶಗಳ ಮೇಲೆ ಸುಂಕವನ್ನು ವಿಧಿಸಲಾಗುವುದು. ಕಳೆದ ವಾರ ನಡೆದ ತಮ್ಮ ಉದ್ಘಾಟನಾ ಭಾಷಣವನ್ನು ಉಲ್ಲೇಖಿಸಿ ಮಾತನಾಡಿದ ಡೊನಾಲ್ಡ್ ಟ್ರಂಪ್, ವಿದೇಶಿ ರಾಷ್ಟ್ರಗಳನ್ನು ಶ್ರೀಮಂತಗೊಳಿಸಲು ನಮ್ಮ ನಾಗರಿಕರಿಗೆ ತೆರಿಗೆ ವಿಧಿಸುವ ಬದಲು, ನಾವು ನಮ್ಮ ನಾಗರಿಕರನ್ನು ಶ್ರೀಮಂತಗೊಳಿಸಲು ವಿದೇಶಿ ರಾಷ್ಟ್ರಗಳಿಗೆ ಸುಂಕ ವಿಧಿಸಬೇಕು ಮತ್ತು ತೆರಿಗೆ ವಿಧಿಸಬೇಕು ಎಂದು ಹೇಳಿದರು.










