ಅಮೆರಿಕಾದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಇಂದು ಪ್ರಮಾಣ ವಚನ ಸ್ವೀಕಾರ.

28
Official portrait of President Donald J. Trump, Friday, October 6, 2017. (Official White House photo by Shealah Craighead)

ನ್ಯೂಯಾರ್ಕ್: ಅಮೆರಿಕದ ಅಧ್ಯಕ್ಷರಾಗಿ 2ನೇ ಬಾರಿ ಚುನಾಯಿತರಾಗಿರುವ ಡೊನಾಲ್ಡ್ ಟ್ರಂಪ್ ಅವರು ಇಂದು ಭಾರತೀಯ ಕಾಲಮಾನ ರಾತ್ರಿ 10.30ಕ್ಕೆ 47ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅಮೆರಿಕಾದ ಅಧ್ಯಕ್ಷರ ಭವನವಾದ ಕ್ಯಾಪಿಟಲ್ ಹೌಸ್‍ನಲ್ಲಿ ನಡೆಯಲಿರುವ ಪ್ರಮಾಣ ವಚನ ಸಮಾರಂಭಕ್ಕೆ ಕ್ಷಣಗಣನೆ ಪ್ರಾರಂಭ ಆಗಿದೆ. ಈ ಕಾರ್ಯಕ್ರಮದಲ್ಲಿ ಅಜೆರ್ಂಟೈನಾ, ಎಲ್ ಸಾಲ್ವಡಾರ್, ಇಟಲಿ, ಚೀನಾ ಮತ್ತು ಹಂಗೇರಿ ಸೇರಿದಂತೆ ಹಲವು ರಾಷ್ಟ್ರಗಳ ಅಧ್ಯಕ್ಷರು ಮತ್ತು ಪ್ರಧಾನ ಮಂತ್ರಿಗಳು ಭಾಗವಹಿಸುವ ಸಾಧ್ಯತೆಯಿದೆ ಎನ್ನುವ ವರದಿ ಲಭ್ಯವಾಗಿದೆ. ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್, ಉದ್ಯಮಿ ಮುಕೇಶ್ ಅಂಬಾನಿ ದಂಪತಿ ಸೇರಿದಂತೆ ಕೆಲವು ಗಣ್ಯರು ಟ್ರಂಪ್ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. 2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಸೋಲನುಭವಿದಾಗ ಬೆಂಬಲಿಗರು ದಾಳಿ ಮಾಡಿದ್ದ ಸ್ಥಳದಲ್ಲಿಯೇ ಇಂದು ಪ್ರಮಾಣವಚನ ನಡೆಯುತ್ತಿರುವುದು ಗಮರ್ಹವಾಗಿದೆ. ಅಮರಿಕ ಚುನಾವಣಾ ಇತಿಹಾಸದಲ್ಲಿ ಈಗಾಗಲೇ ಡೊನಾಲ್ಡ್ ಟ್ರಂಪ್ ಅಬರು 1 ಬಾರಿ ಗೆದ್ದು, ನಂತರ ಸೋತು ಮತ್ತೆ ಈಗ ಪುನಃ ಗೆದ್ದ ಇತಿಹಾಸ ಸೃಷ್ಟಿಸಿದ್ದಾರೆ. ಪ್ರಮಾಣ ವಚನ ಕಾರ್ಯಕ್ರಮವು ಯಾವಾಗಲೂ ಅಧ್ಯಕ್ಷಿಯ ಭವನದ ಹೊರಗಡೆಯೇ ನಡೆಯುತ್ತಿತ್ತು. ಆದರೆ ಈ ಭಾರೀ ಭೀಕರ ಚಳಿ ಹಿನ್ನಲೆ ಅಧ್ಯಕ್ಷೀಯ ಭವನದ ಹೊಳಗಡೆ ನಡೆಯಲಿದೆ. ಮೊದಲು ಉಪಾಧ್ಯಕ್ಷರಾಗಿ ಚುನಾಯಿತರಾದ ಜೆ.ಡಿ ವ್ಯಾನ್ಸ್ ಅವರು ಪ್ರಮಾಣ ವಚನವನ್ನು ಸ್ವೀಕಾರ ಮಾಡಲಿದ್ದಾರೆ.