ಅಸ್ಸಾಂನ ಗುವಾಹಟಿಯಲ್ಲಿ ಭೂ ಕುಸಿತ : ನಾಲ್ವರು ಜೀವಂತ ಸಮಾಧಿ…

60
firstsuddi

ಗುವಾಹಟಿ : ಅಸ್ಸಾಂನ ಗುವಾಹಟಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಭೂ ಕುಸಿತ ಸಂಭವಿಸಿದ್ದು, ನಾಲ್ವರು ಜೀವಂತ ಸಮಾಧಿಯಾಗಿದ್ದಾರೆ.

ಬೋರಗಾಂವ್ ಸಮೀಪದ ನಿಜಾರಪರ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಡುರಾತ್ರಿ ಮನೆ ಕುಸಿದು, ನಿದ್ರೆಯಲ್ಲಿದ್ದ ನಾಲ್ವರು ಶವವಾಗಿ ಪತ್ತೆಯಾಗಿದ್ದಾರೆ.

ಸ್ಥಳೀಯ ಮಾಧ್ಯಮಗಳ ಪ್ರಕಾರ, ಮೃತ ಕಾರ್ಮಿಕರನ್ನು ಮುನ್ವರ್ ಹುಸೇನ್, ಮೊಫಿಜುಲ್ ಹಕ್, ಅಮರುಲ್ ಹಕ್ ಮತ್ತು ಅಸನೂರ್ ಅಲಿ ಎಂದು ಗುರುತಿಸಲಾಗಿದ್ದು, ಅವರು ಕುಸಿದುಬಿದ್ದ ಮನೆಯಲ್ಲಿ ಬಾಡಿಗೆದಾರರಾಗಿ ವಾಸಿಸುತ್ತಿದ್ದರು.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಪಶ್ಷಿಮ ವಿಭಾಗದ ಡಿಸಿಪಿ ನಬನೀತ್ ಮಹಾನ್, ಭೂಕುಸಿತ ಸ್ಥಳದಲ್ಲಿ ನಾಲ್ವರು ಕಾರ್ಮಿಕರು ವಾಸಿಸುತ್ತಿದ್ದರು. ಅವರೆಲ್ಲರೂ ಅವಶೇಷಗಳಡಿ ಸಿಲುಕಿ ಸಾವನ್ನಪ್ಪಿದ್ದಾರೆ. ಕಾರ್ಮಿಕರ ಮೃತದೇಹವನ್ನು ಹೊರಗೆ ತೆಗೆಯಲಾಗಿದೆ ಎಂದು ತಿಳಿಸಿದ್ದಾರೆ.