ಅಸ್ಸಾಂ ಕಾರಾಗೃಹದಿಂದ ತಪ್ಪಿಸಿಕೊಂಡಿದ್ದ  ಆರೋಪಿಗಳನ್ನು ಬಂಧಿಸಿದ್ದ ಚಿಕ್ಕಮಗಳೂರು  ಪೊಲೀಸರು.

20
ಚಿಕ್ಕಮಗಳೂರು :ಅಸ್ಸಾಂ ಮೋರಿಗಾಂವ್‌ ಜಿಲ್ಲಾ ಕಾರಾಗೃಹದಿಂದ ಪರಾರಿಯಾದ ಪೋಕ್ಸೋ ಕಾಯ್ದೆಯಡಿ ಅಪರಾಧಿಗಳಿಬ್ಬರನ್ನು ಆಗಸ್ಟ್ 26 ರಂದು  ಚಿಕ್ಕಮಗಳೂರು ಜಿಲ್ಲೆಯಲ್ಲಿ ಪತ್ತೆಹಚ್ಚಲಾಗಿದೆ. ಸ್ಥಳೀಯ ಪೊಲೀಸರು ಬಂಧಿಸಿ ಅವರನ್ನು ಅಸ್ಸಾಂ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ಅಸ್ಸಾಂನ ಮೊರಿಗಾಂವ್ ಜಿಲ್ಲೆಯ ಎಂ.ಡಿ.ಜೈರುಲ್ ಇಸ್ಲಾಂ (24) ಮತ್ತು ಸುಬ್ರತಾ ಸರ್ಕಾರ್ (33) ಅವರಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿತು. ಆಗಸ್ಟ್ 20 ರಂದು, ಅವರು ಮೋರಿಗಾಂವ್‌ನಲ್ಲಿರುವ ಜಿಲ್ಲಾ ಕಾರಾಗೃಹದಿಂದ ಬ್ಯಾರಕ್‌ನ ರಾಡ್‌ಗಳನ್ನು ಒಡೆದು ಜೈಲಿನ ಗೋಡೆಗಳನ್ನು ಹರಿತಪ್ಪಿಸಿಕೊಂಡಿದ್ದರು .
ಇವರಿಬ್ಬರು ಚಿಕ್ಕಮಗಳೂರಿಗೆ ಹೋಗಿರಬೇಕು ಎಂದು ಅಸ್ಸಾಂ ಪೊಲೀಸರು ತನಿಖೆ ವೇಳೆ ಶಂಕಿಸಿದ್ದಾರೆ. ಆರೋಪಿಗಳಲ್ಲಿ ಒಬ್ಬನಿಗೆ ಚಿಕ್ಕಮಗಳೂರಿಗೆ ಸಂಪರ್ಕವಿದೆ ಎಂದು ತಿಳಿದು ಬಂದಿರುತ್ತದೆ ಬಳಿಕ . ಅಸ್ಸಾಂ ಪೊಲೀಸರು ಚಿಕ್ಕಮಗಳೂರು ಪೊಲೀಸರನ್ನು ಸಂಪರ್ಕಿಸಿ ಸಹಾಯ ಕೋರಿದು.ಇವರ ಪತ್ತೆಗೆ ಚಿಕ್ಕಮಗಳೂರು ಪೊಲೀಸ್ ವರಿಷ್ಠಾಧಿಕಾರಿ  ವಿಕ್ರಮ್ ಅಮಟೆ ಅವರು ತಂಡ ರಚಿಸಿದ್ದರು. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಇನ್ಸ್‌ಪೆಕ್ಟರ್ ಸಚಿನ್ ಮತ್ತು  ರಘುನಾಥ್  ತಂಡ ಆಗಸ್ಟ್ 26 ರಂದು ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಅವರನ್ನು ಅಸ್ಸಾಂ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.