ಆಂಧ್ರಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ- ಎಂಎಲ್‌ಸಿ ಪರ್ವತರೆಡ್ಡಿಗೆ ಗಂಭೀರ ಗಾಯ, ಪಿಎ ಸಾವು…

48
firstsuddi

ಆಂಧ್ರಪ್ರದೇಶ: ನೆಲ್ಲೂರಿನಲ್ಲಿ ನಿನ್ನೆ ತಡರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಎಂಎಲ್‌ಸಿ ಪರ್ವತರೆಡ್ಡಿ ಚಂದ್ರಶೇಖರ್ ರೆಡ್ಡಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆಯಲ್ಲಿ ಎಂಎಲ್‌ಸಿ ಸಹಾಯಕ ವೆಂಕಟೇಶ್ವರಲು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದು, ಕಾರು ಚಾಲಕನಿಗೆ ಗಂಭೀರ ಗಾಯಗಳಾಗಿವೆ.

ಪರ್ವತ ರೆಡ್ಡಿ ತಮ್ಮ ಕಾರಿನಲ್ಲಿ ವಿಜಯವಾಡದಿಂದ ನೆಲ್ಲೂರಿಗೆ ತೆರಳುತ್ತಿದ್ದರು. ಇವರ ಕಾರಿನ ಮುಂದೆ ಲಾರಿಯೊಂದು ಸಂಚರಿಸುತ್ತಿತ್ತು. ಏಕಾಏಕಿ ಪಂಕ್ಚರ್ ಆಗಿದ್ದರಿಂದ ಲಾರಿಯು ನಿಧಾನವಾಗಿ ಚಲಿಸಿದೆ. ಈ ವೇಳೆ ಪರ್ವತರೆಡ್ಡಿ ಅವರು ಇದ್ದ ಕಾರು ಲಾರಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದು ಡಿವೈಡರ್ ಮೇಲೆ ಪಲ್ಟಿಯಾಗಿ ಬಿದ್ದಿದೆ. ಪರಿಣಾಮ ಪರ್ವತರೆಡ್ಡಿ ಅವರ ಪಿಎ ಸ್ಥಳದಲ್ಲೇ ಸಾವನ್ನಪ್ಪಿದ್ದು, ಎಂಎಲ್‌ಸಿ ತಲೆಗೆ ಗಂಭೀರ ಗಾಯಗಳಾಗಿವೆ. ಗಂಭೀರ ಗಾಯಗೊಂಡಿದ್ದ ಎಂಎಲ್‌ಸಿ ಹಾಗೂ ಇತರ ಎಲ್ಲಾ ಗಾಯಾಳುಗಳನ್ನು ತಕ್ಷಣವೇ ನೆಲ್ಲೂರು ಅಪೋಲೋ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅವರ ಜೀವಕ್ಕೆ ಅಪಾಯವಿಲ್ಲ ಎಂದು ವೈದ್ಯರು ಭರವಸೆ ನೀಡಿದ್ದಾರೆ.