ಆಕ್ಸಿಜನ್ ಲಿಕ್ವಿಡ್ ಸಾಗಿಸುತ್ತಿದ್ದ ಟ್ಯಾಂಕರ್ ಅಪಘಾತ, ತಪ್ಪಿದ ಭಾರೀ ಅನಾಹುತ…

134
firstsuddi

ಬೆಳಗಾವಿ : ನಗರಕ್ಕೆ 16 ಕೆ.ಎಲ್ ಸಾಮರ್ಥ್ಯದ ಆಕ್ಸಿಜನ್ ಲಿಕ್ವಿಡ್ ಸಾಗಿಸುತ್ತಿದ್ದ ಟ್ಯಾಂಕರ್ ಅಪಘಾತಕ್ಕೀಡಾಗಿರುವ ಘಟನೆ ತಾಲ್ಲೂಕಿನ ಮುತ್ನಾಳ ಗ್ರಾಮದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸಂಭವಿಸಿದೆ.

ಇಂದು ಬೆಳಗ್ಗೆ ಈ ಘಟನೆ ಸಂಭವಿಸಿದ್ದು, ಬಳ್ಳಾರಿಯಿಂದ ನಗರಕ್ಕೆ ಆಕ್ಸಿಜನ್ ಲಿಕ್ವಿಡ್ ಸಾಗಿಸಲಾಗುತ್ತಿದ್ದು ಎಂದು ತಿಳಿದುಬಂದಿದೆ. ಓವರ್ ಟೇಕ್ ಮಾಡುವ ವೇಳೆ ಮುಂಬದಿಯ ಲಾರಿಗೆ ಆಕ್ಸಿಜನ್ ಟ್ಯಾಂಕರ್ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಅಪಘಾತದ ವೇಳೆ ಆಕ್ಸಿಜನ್ ಲಿಕ್ವಿಡ್ ಟ್ಯಾಂಕ್ ಗೆ ಯಾವುದೇ ಹಾನಿ ಸಂಭವಿಸಿಲ್ಲ. ಡಿಕ್ಕಿ ಹೊಡೆದ ರಭಸಕ್ಕೆ ಟ್ಯಾಂಕರ್ ನ ಚಕ್ರ ಬ್ಲಾಸ್ಟ್ ಆಗಿ ಎಕ್ಸಲ್ ತುಂಡಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿರುವ ಅಧಿಕಾರಿಗಳು ಬೇರೆ ಆಕ್ಸಿಜನ್ ಟ್ಯಾಂಕರ್ ತರಿಸಿ ಆಕ್ಸಿಜನ್ ಲಿಕ್ವಿಡ್ ಶಿಫ್ಟ್ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.