ಆಟೋ ಕೊಡಿಸಿ, ಇಲ್ಲ ಆಸ್ತಿಯಲ್ಲಿ ಪಾಲು ಕೊಡಿ ಎಂದಿದ್ದಕ್ಕೆ ತಮ್ಮನನ್ನೇ ಕೊಂದ ಅಣ್ಣ!

68
firstsuddi

ಶಿವಮೊಗ್ಗ : ತನಗೊಂದು ಆಟೋ ಕೊಡಿಸಿ, ಇಲ್ಲ ಆಸ್ತಿಯಲ್ಲಿ ಪಾಲು ಕೊಡಿ ಎಂದ ತಮ್ಮನನ್ನ ಅಣ್ಣ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಬೊಮ್ಮನಕಟ್ಟೆ ಬಡಾವಣೆಯಲ್ಲಿ ನಡೆದಿದೆ.

ಗುರುಪ್ರಸಾದ್ (26) ಕೊಲೆಯಾಗಿರುವ ಯುವಕ. ಗುರುಪ್ರಸಾದ್ ತನಗೊಂದು ಆಟೋ ಕೊಡಿಸಿ, ಇಲ್ಲವಾದಲ್ಲಿ ಆಸ್ತಿ ಭಾಗ ಮಾಡಿ ಎಂದು ತನ್ನ ಅಮ್ಮನ ಜೊತೆ ಜಗಳವಾಡುತ್ತಿದ್ದನು. ಈ ವೇಳೆ ಸಹೋದರ ವಿಶ್ವನಾಥ್, ಅಮ್ಮ ಏಕೆ ನಿನಗೆ ಆಟೋ ಕೊಡಿಸಬೇಕು, ನೀನೇ ದುಡಿದು ಆಟೋ ಕೊಂಡುಕೊಳ್ಳುವಂತೆ ಹೇಳಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದಿದ್ದು, ಇದರಿಂದ ಕೋಪಗೊಂಡ ವಿಶ್ವನಾಥ್ ಮನೆಯಲ್ಲಿ ಇದ್ದ ಗಾರೆ ಕೆಲಸಕ್ಕೆ ಬಳಸುವ ಮಟ್ಟಗೋಲಿನಿಂದ ತಲೆ ಹಾಗೂ ಕಿವಿ ಗೆ ಹೊಡೆದ ಪರಿಣಾಮ ಗುರುಪ್ರಸಾದ್ ಸಾವನ್ನಪ್ಪಿದ್ದಾನೆ.

ಈ ಕುರಿತು ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ವಿಶ್ವನಾಥ್ನನ್ನು ಬಂಧಿಸಿ, ತನಿಖೆ ನಡೆಸುತ್ತಿದ್ದಾರೆ.