ಆನ್‍ಲೈನ್ ತರಗತಿಗೆ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ…

252
firstsuddi

ಬೆಂಗಳೂರು : ರಾಜ್ಯಾದ್ಯಂತ ಕೊರೊನಾ ಸೋಂಕಿನ ಭೀತಿ ಇರುವುದರಿಂದ ಇನ್ನೂ ಶಾಲಾ-ಕಾಲೇಜು ಆರಂಭವಾಗಿಲ್ಲ. ಆದರೆ ಮಕ್ಕಳು ಶಿಕ್ಷಣ ವಂಚಿತರಾಗಬಾರದೆಂದು ಶಿಕ್ಷಣ ತಜ್ಞರ ಸಮಿತಿಯ ಶಿಫಾರಸ್ಸಿನ ಅನ್ವಯ ಮಕ್ಕಳಿಗೆ ಆನ್‍ಲೈನ್ ತರಗತಿ ಮಾಡಲಾಗುತ್ತಿತ್ತು. ಆದರೆ ಶಾಲಾ ಶಿಕ್ಷಕರು ಮಾರ್ಗಸೂಚಿಗಳನ್ನು ಪಾಲಿಸದೇ ಮಕ್ಕಳಿಗೆ ಹೆಚ್ಚಿನ ಸಮಯ ಆನ್‍ಲೈನ್ ತರಗತಿ ತೆಗೆದುಕೊಳ್ಳುತ್ತಿದ್ದು, ಇದರಿಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತಿದೆ ಎಂದು ಆರೋಪಗಳು ಕೇಳಿಬಂದ ಹಿನ್ನೆಲೆ, ರಾಜ್ಯ ಸರ್ಕಾರ ಆನ್‍ಲೈನ್ ತರಗತಿಗೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.
• ಆನ್‍ಲೈನ್ ತರಗತಿ ನಡೆಸಲು ಸಮಯ ನಿಗದಿ ಮಾಡಲಾಗಿದ್ದು, ವಯೋಮಾನಕ್ಕನುಗುಣವಾಗಿ ದಿನಕ್ಕೆ 1 ರಿಂದ 4 ಗರಿಷ್ಠ ಅಧಿವೇಶನಗಳು 2 ನೇ ತರಗತಿಯವರೆಗೆ ವಾರದಲ್ಲಿ ಪರ್ಯಾಯ ದಿನಗಳ ಬೋಧನೆ.
• 2 ನೇ ತರಗತಿಯವರೆಗೆ ಪೋಷಕರ ಉಪಸ್ಥಿತಿ ಕಡ್ಡಾಯ.
• ಸಿಂಕ್ರೊನಸ್ (ನೇರ ಪ್ರಸಾರದ ಅಧಿವೇಶನಗಳು) ಮತ್ತು ಅಸಿಂಕ್ರೊನಸ್ (ಪೂರ್ವ-ಮುದ್ರಿತ ಅಧಿವೇಶನಗಳು) ವಿಧಾನಗಳಿಗೆ ಅನುಮತಿ ನೀಡಲಾಗಿದೆ.
• 3-6 ವರ್ಷದ ( ಪ್ರೀ-ಪ್ರೈಮರಿ) ಮಕ್ಕಳಿಗೆ ಆಟ- ಕಥೆ ಹೇಳುವುದು- ಪದ್ಯ- ಆಸಕ್ತಿಕರ ಚಟುವಟಿಕೆಯಷ್ಟೇ ಆನ್ ಲೈನ್ ಮಾಡಿಸಬೇಕು.( ಮೂರು ದಿನಗಳು)
• 1-2 ನೇ ತರಗತಿ ಮಕ್ಕಳಿಗೂ ಇದೇ ನಿಯಮ ಜಾರಿಯಲ್ಲಿ ಇರುತ್ತದೆ. ( ಮೂರು ದಿನಗಳು)
• 3-5ನೇ ತರಗತಿ ಮಕ್ಕಳಿಗೆ ಶೇಕಡ 25 ರಷ್ಟು ಪಠ್ಯ ಕ್ರಮ- ಶೇಕಡ 75 ರಷ್ಟು ಸಾಮಾನ್ಯ ಜ್ಞಾನ. (5 ದಿನಗಳು)
• 6-8ನೇ ತರಗತಿ ಮಕ್ಕಳಿಗೆ ಶೇಕಡ 50 ರಷ್ಟು ಪಠ್ಯ ಕ್ರಮ- ಶೇಕಡ 50 ರಷ್ಟು ಸಾಮಾನ್ಯ ಜ್ಞಾನ. (5 ದಿನಗಳು)
• 9-10ನೇ ತರಗತಿ ಮಕ್ಕಳಿಗೆ ಶೇಕಡ 75 ರಷ್ಟು ಪಠ್ಯ ಕ್ರಮ- ಶೇಕಡ 25 ರಷ್ಟು ಸಾಮಾನ್ಯ/ಪಠ್ಯಕ್ರಮ. (5 ದಿನಗಳು)