ಆರ್ಥಿಕ ಹಿಂಜರಿತದ ಹಾದಿಯಲ್ಲಿ ಜರ್ಮನಿ.

54
firstsuddi

ಬರ್ಲಿನ್: ಯುರೋಪ್ ನ ಅತಿ ದೊಡ್ಡ ಆರ್ಥಿಕತೆ ಹಾಗೂ ಜಗತ್ತಿನ 4ನೇ ಅತಿ ದೊಡ್ಡ ಆರ್ಥಿಕತೆಯಾಗಿರುವ ಜರ್ಮನಿ, ಆರ್ಥಿಕತೆಯಲ್ಲಿ ಹಿಂಜರಿತ ಕಂಡಿದೆ.

ಇಂದು ಜರ್ಮನಿಯ ಅಂಕಿಅಂಶಗಳ ಕಚೇರಿ ವರ್ಷದ ಮೊದಲ ತ್ರೈಮಾಸಿಕ ಜಿಡಿಪಿ (ಒಟ್ಟು ದೇಶೀಯ ಉತ್ಪನ್ನ) ವರದಿಯನ್ನು ಬಿಡುಗಡೆಗೊಳಿಸಿದೆ. ಜಿಡಿಪಿ ಬೆಳವಣಿಗೆ ದರ 0.3%ಕ್ಕೆ ಇಳಿದಿದ್ದು, ಇದೀಗ ಜರ್ಮನಿ ಆರ್ಥಿಕ ಹಿಂಜರಿತದ ಹಾದಿಯಲ್ಲಿದೆ.

ಇತ್ತ ಡೀಫಾಲ್ಟ್ ಆಗುವ ಭೀತಿ ಎದುರಿಸುತ್ತಿದ್ದ ಅಮೇರಿಕಾ, ಡಾಲರ್ ಮೌಲ್ಯದಲ್ಲಿ ಚೇತರಿಸಿಕೊಂಡಿದ್ದು ಸೇಫ್ ಹೆವನ್ ಡಿಮಾಂಡ್ ಯಿಂದಾಗಿ 2 ತಿಂಗಳಲ್ಲೇ ಗರಿಷ್ಠ ಏರಿಕೆ ಕಂಡಿದೆ. ಯುರೋಪ್ ನಲ್ಲಿ ಆರ್ಥಿಕ ದುರ್ಬಲತೆಯ ಸೂಚನೆಗಳು ಲಭಿಸುತ್ತಿದ್ದು, ಡಾಲರ್ ವಿರುದ್ಧ ಬಹು-ತಿಂಗಳ ಕನಿಷ್ಠ ಮಟ್ಟಕ್ಕೆ ಯುರೋ ಕುಸಿದಿದೆ.

ಕಳೆದ ವರ್ಷದ ಕೊನೆಯಲ್ಲಿ ಜರ್ಮನಿ ಆರ್ಥಿಕ ಹಿಂಜರಿತಕ್ಕೆ ಸಿಲುಕಿಕೊಂಡಿತು. ಇದಕ್ಕೆ ಮುಖ್ಯ ಕಾರಣ ಇಂಧನ ಬೆಲೆಯಲ್ಲಿನ ಏರಿಕೆ. ಈ ಹಿನ್ನೆಲೆ ಗ್ರಾಹಕರು ತಮ್ಮ ಖರ್ಚು ವೆಚ್ಚಗಳನ್ನು ಮಿತವಾಗಿ ಬಳಸುತ್ತಿದ್ದಾರೆ ಎಂದು ಪ್ಯಾಂಥಿಯಾನ್ ಮ್ಯಾಕ್ರೋ ಎಕನಾಮಿಕ್ಸ್‌ನ ಮುಖ್ಯ ಯೂರೋ ವಲಯದ ಅರ್ಥಶಾಸ್ತ್ರಜ್ಞ ಕ್ಲಾಸ್ ವಿಸ್ಟೆಸೆನ್ ತಿಳಿಸಿದ್ದಾರೆ.