ಆರ್​ಎಸ್ಎಸ್ ಬ್ಯಾನ್ ಮಾಡಿ ಎಂದು ಹೇಳುವುದೇ ದೊಡ್ಡ ದುರ್ದೈವ : ಸಿಎಂ ಬೊಮ್ಮಾಯಿ.

45
firstsuddi

ಹುಬ್ಬಳ್ಳಿ : ಆರ್​ಎಸ್ಎಸ್ ದೇಶ ಪ್ರೇಮಿ ಸಂಘಟನೆ. ಬಡವರು, ಅನಾಥ ಮಕ್ಕಳು ಕಟ್ಟಿರುವ ದೀನ ದಲಿತರ ಪರವಾದ ಸಂಘಟನೆಯಾಗಿದೆ. ಹೀಗಾಗಿ, ಆರ್​ಎಸ್ಎಸ್ ಬ್ಯಾನ್ ಮಾಡಿ ಎಂದು ಹೇಳುವುದೇ ದೊಡ್ಡ ದುರ್ದೈವ ಎಂದು ಸಿದ್ದರಾಮಯ್ಯ ವಿರುದ್ಧ ಸಿಎಂ ಬಸವರಾಜ ಬೊಮ್ಮಾಯಿ ಕಿಡಿಕಾರಿದರು.

ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನವರಿಗೆ ಪಿಎಫ್ಐ ಯಾಕೆ ಬ್ಯಾನ್ ಮಾಡಿದ್ರಿ ಎಂದು ಕೇಳಲು ಆಧಾರವಿಲ್ಲ. ಈ ಹಿಂದೆ ಅವರೇ ಪಿಎಫ್ಐ ಮೇಲಿನ ಕೇಸ್ ಗಳನ್ನು ತೆಗೆದು ಹಾಕಿದ್ರು. ಈಗ ಅದನ್ನು ಮರೆಮಾಚಲು ಆರ್​ಎಸ್ಎಸ್ ಬ್ಯಾನ್ ಮಾಡುವಂತೆ ಹೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಇದೇ ಮೊದಲ ಬಾರಿಗೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರ ಚುನಾವಣೆ ನಡೆಯುತ್ತಿದೆ. ಆ ಬಗ್ಗೆ ನನ್ನ ವೈಯಕ್ತಿಕ ಅಭಿಪ್ರಾಯ ಇಲ್ಲ. ಅದು ಅವರ ಪಕ್ಷದ ವೈಯಕ್ತಿಕ ವಿಚಾರ ಎಂದು ಹೇಳಿದರು.