ಆಸ್ತಿ ವಿಚಾರಕ್ಕೆ ಕಿತ್ತಾಟ: ಕಾರು ಹತ್ತಿಸಿ ಅಣ್ಣನನ್ನೇ ಕೊಲೆಗೈದ ಸಹೋದರರು…

46
firstsuddi

ಶಿವಮೊಗ್ಗ: ಆಸ್ತಿಗಾಗಿ, ಇಬ್ಬರು ಸಹೋದರರು ಸೇರಿ ಕಾರು ಹತ್ತಿಸಿ ಅಣ್ಣನನ್ನೇ ಕೊಲೆಗೈದ ಘಟನೆ ಜಿಲ್ಲೆಯ ಸಾಗರ ತಾಲೂಕಿನ ಚಿಪ್ಪಳ್ಳಿ ಬಳಿ ಫೆ.29ರ ಸಂಜೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ರಫೀಕ್(45) ಮೃತ ವ್ಯಕ್ತಿ. ಆರೋಪಿಗಳಾದ ಇನಾಯತ್ ಮತ್ತು ಅಕ್ಕನ ಮಗ ಸಮೀರ್, ರಸ್ತೆ ಬಳಿ ರಫೀಕ್ ಮೇಲೆ ಕಾರು ಹತ್ತಿಸಿ ಕೊಲೆ ಮಾಡುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಆನಂದಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದರು. ಘಟನೆಯ ಬಳಿಕ ಆರೋಪಿಗಳು ಪರಾರಿಯಾಗಿದ್ದರು.

ಈ ಘಟನೆ ಆನಂದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದಾರೆ.