ಇಂದಿನಿಂದ ಎಲ್​ಪಿಜಿ ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ಬೆಲೆ ಹೆಚ್ಚಳ…

68
firstsuddi

ನವದೆಹಲಿ: ಎಲ್​ಪಿಜಿ ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ಬೆಲೆ ಇಂದಿನಿಂದ ಹೆಚ್ಚಳವಾಗಿದೆ.

ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ವಾಣಿಜ್ಯ ಬಳಕೆಯ ಪ್ರತಿ ಸಿಲಿಂಡರ್ ಬೆಲೆಯನ್ನು 25 ರೂಪಾಯಿ ಏರಿಕೆ ಮಾಡಿವೆ. ಇದರೊಂದಿಗೆ, ಸತತ ಎರಡನೇ ತಿಂಗಳು ಎಲ್​ಪಿಜಿ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಹೆಚ್ಚಳವಾದಂತಾಗಿದೆ.

ಈಗಿನ ಬೆಲೆಗಳ ಏರಿಕೆಯ ನಂತರ, ದೆಹಲಿಯಲ್ಲಿ ವಾಣಿಜ್ಯ ಎಲ್​ಪಿಜಿ ಸಿಲಿಂಡರ್ 1,795 ರೂ.ಗೆ ಲಭ್ಯವಾಗಲಿದೆ. ಬೆಲೆ ಏರಿಕೆಯು ಕೋಲ್ಕತ್ತಾ, ಮುಂಬೈ, ಚೆನ್ನೈ ಮತ್ತು ಇತರ ಮಹಾನಗರಗಳ ಜನರ ಮೇಲೂ ಪರಿಣಾಮ ಬೀರಿದೆ.