ಇಸ್ರೋದಿಂದ ರಿಸ್ಯಾಟ್-2BR1 ಹಾಗೂ ವಿದೇಶಿ 9 ಉಪಗ್ರಹಗಳ ಯಶಸ್ವಿ ಉಡಾವಣೆ…

184
firstsuddi

ಶ್ರೀಹರಿಕೋಟ : ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ವಿದೇಶಿ 9 ಉಪಗ್ರಹಗಳೂ ಸೇರಿದಂತೆ ಒಟ್ಟು 10 ಉಪಗ್ರಹಗಳನ್ನು ಹೊತ್ತೊಯ್ಯವ ಪಿಎಸ್‍ಎಲ್‍ವಿ-ಸಿ47 ರಾಕೆಟ್‍ನ್ನು ಇಂದು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಕಾಶ ಕೇಂದ್ರದಿಂದ ಇಂದು ಮಧ್ಯಾಹ್ನ 3.35ಕ್ಕೆ ವಿ ಸಿ-48 ರಾಕೆಟ್ ಅನ್ನು ಉಡಾವಣೆ ಮಾಡಲಾಗಿದ್ದು, ರಾಕೆಟ್ ಭಾರತದ 628 ಕೆ.ಜಿ. ತೂಕದ ಭೂ ಪರಿವೀಕ್ಷಣಾ ಉಪಗ್ರಹ ರಿಸ್ಯಾಟ್-2BR1 ಸೇರಿದಂತೆ ವಿದೇಶಗಳ 9 ವಾಣಿಜ್ಯ ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದ್ದು, ಇದು ಸತೀಶ್ ಧವನ್ ಬಾಹ್ಯಾಕಾಶ ಉಡಾವಣಾ ಕೇಂದ್ರಕ್ಕೆ 50ನೇ ಯಶಸ್ವಿ ಉಡಾವಣೆಯಾಗಿದೆ.