ಉತ್ತರ ಕನ್ನಡ: ಮಂಗನ ಕಾಯಿಲೆಗೆ ಮೊದಲ ಬಲಿ…

51
firstsuddi

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಹೆಚ್ಚಾಗುತ್ತಿದ್ದು, ಇದೀಗ ಮೊದಲ ಸಾವು ಪ್ರಕರಣ ದಾಖಲಾಗಿದೆ. ಸಿದ್ದಾಪುರದ ಜಿಡ್ಡಿಯ 65 ವರ್ಷದ ಮಹಿಳೆ ಮಂಗನ ಕಾಯಿಲೆಗೆ ಬಲಿಯಾಗಿದ್ದಾರೆ.

ಇಲ್ಲಿಯವರೆಗೆ ಜಿಲ್ಲೆಯಲ್ಲಿ 43 ಮಂಗನ ಕಾಯಿಲೆ ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲಿ ಎಲ್ಲಾ ಪ್ರಕರಣಗಳು ಸಿದ್ದಾಪುರ ತಾಲೂಕಿನಲ್ಲೇ ಪತ್ತೆಯಾಗಿವೆ. ಈ ತಾಲೂಕಿನಲ್ಲಿ ಮಂಗನ ಕಾಯಿಲೆ ದಿನೇ ದಿನೇ ಹೆಚ್ಚಳವಾಗುತ್ತಿದ್ದು, ಸೂಕ್ತ ಲಸಿಕೆ ಇಲ್ಲದೆ ಆರೋಗ್ಯ ಸಿಬ್ಬಂದಿ ಆತಂಕದಲ್ಲೆ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕಳೆದ 2 ವರ್ಷಗಳ ಹಿಂದೆ ಲಸಿಕೆಯನ್ನ ಬಂದ್ ಮಾಡಲಾಗಿತ್ತು. ಯಾವುದೇ ಪರ್ಯಾಯ ಲಸಿಕೆಯನ್ನು ಸರ್ಕಾರ ಸೂಚಿಸಿರಲಿಲ್ಲ. ಇದರಿಂದ ಮನೆಯಿಂದ ಹೊರ ಬರಲು ಹೆದರುವ ಸ್ಥಿತಿ ಉಂಟಾಗಿದೆ.

ಇನ್ನು ಮಂಗನ ಕಾಯಿಲೆ ಕುರಿತಂತೆ ಹಲವು ಸಭೆಗಳು ನಡೆದಿದ್ದರೂ ಯಾವುದೇ ಲಸಿಕೆ ಮಾತ್ರ ಜನರಿಗೆ ಲಭ್ಯವಾಗಿಲ್ಲ. ಒಂದೆಡೆ ಮಂಗನ ಕಾಯಿಲೆ ಏರುತ್ತಲೇ ಇದ್ದು, ಲಸಿಕೆಯೂ ಇಲ್ಲದೇ ಜನರು ಪರದಾಡುವಂತಾಗಿದೆ.