ನವದೆಹಲಿ : ಬ್ಯಾಂಕ್‍ಗಳಿಗೆ ವಂಚನೆ ಮಾಡಿ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯಾ ಅವರ ಜಪ್ತಿಯಾಗಿರುವ ಆಸ್ತಿಯನ್ನು ಹರಾಜು ಹಾಕುವಂತೆ ದೆಹಲಿಯ ಪಿಎಂಎಲ್‍ಎ ಕೋರ್ಟ್ ಆದೇಶ ಹೊರಡಿಸಿದ್ದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಬ್ಯಾಂಕ್‍ಗಳ ಒಕ್ಕೂಟ ಈ ಆಸ್ತಿಗಳನ್ನು ಹರಾಜು ಮಾಡಲಿದೆ. ಈ ತೀರ್ಪು ಜನವರಿ 18ರ ನಂತರ ಜಾರಿಯಾಗಲಿದ್ದು, ಅಲ್ಲಿಯವರೆಗೆ ಸಂಬಂಧಪಟ್ಟವರು ಕೋರ್ಟ್ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಅರ್ಜಿಯನ್ನು ಸಲ್ಲಿಸಬಹುದು ಎಂದು ತಿಳಿಸಿದೆ. ಉದ್ಯಮಿ ವಿಜಯ್ ಮಲ್ಯಾ ಅವರು ಬ್ಯಾಂಕ್‍ಗಳಿಗೆ 9000 ಕೋಟಿ ಸಾಲವನ್ನು ಮರು ಪಾವತಿಸದೆ ಲಂಡನ್‍ಗೆ ಪರಾರಿಯಾಗಿದ್ದು, ಅವರನ್ನು ವಾಪಾಸ್ ಕರೆತರಲು ಕೇಂದ್ರ ಸರ್ಕಾರ ಹಾಗೂ ಭಾರತೀಯ ತನಿಖಾ ಸಂಸ್ಥೆಗಳು ನಿರಂತ ಪ್ರಯತ್ನ ಮಾಡುತ್ತಿದ್ದು, ಆದರೆ ಇದುವರೆಗೂ ಯಶಸ್ವಿಯಾಗಿಲ್ಲ.










