ದೇಶದ ಮೊದಲ ಸಿಡಿಎಸ್(ಚೀಫ್ ಆಫ್ ಡಿಫೆನ್ಸ್ ಸ್ಟಾಫ್) ಆಗಿ ಜ.ಬಿಪಿನ್ ರಾವತ್ ಅಧಿಕಾರ ಸ್ವೀಕಾರ…

187
firstsuddi

ನವದೆಹಲಿ : ದೇಶದ ಮೊದಲ ಸಿಡಿಎಸ್(ಚೀಫ್ ಆಫ್ ಡಿಫೆನ್ಸ್ ಸ್ಟಾಫ್) ಆಗಿ ಸೇನಾ ಮುಖ್ಯಸ್ಥ ಸ್ಥಾನದಿಂದ ನಿವೃತ್ತಿಯಾದ ಜನರಲ್ ಬಿಪಿನ್ ರಾವತ್ ಅವರು ಅಧಿಕಾರ ಸ್ವೀಕರಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಅವರಿಗೆ ಅಭಿನಂದನೆ ತಿಳಿಸಿದ್ದಾರೆ. ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಭದ್ರತೆಗೆ ಇರುವ ಮೂರು ಸೇನೆಗಳು ಒಂದು ತಂಡವಾಗಿ ಕಾರ್ಯನಿರ್ವಹಿಸಲಿದೆ. ರಾಜಕೀಯದಿಂದ ಸಶಸ್ತ್ರ ಪಡೆಗಳು ದೂರ ಇರಲಿದ್ದು, ಸರ್ಕಾರದ ನಿರ್ದೇಶನಗಳನ್ನು ಮಾತ್ರ ಅನುಸರಿಸುತ್ತೇವೆ. ಮೂರು ಸೇನಾ ಪಡೆಗಳಿಗೆ ಹಂಚಿಕೆಯಾಗುವ ಸಂಪನ್ಮೂಲಗಳನ್ನು ಉತ್ತಮ ಹಾಗೂ ಸೂಕ್ತ ಬಳಕೆ ಮಾಡಿಕೊಳ್ಳುವಲ್ಲಿ ಗಮನಹರಿಸುತ್ತೇವೆ ಎಂದು ತಿಳಿಸಿದ್ದಾರೆ. ಸೇನಾ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದ ಬಿಪಿನ್ ರಾವತ್ ಅವರನ್ನು ಕೇಂದ್ರ ಸರ್ಕಾರ ಡಿ30ರಂದು ಸಿಡಿಎಸ್ ಆಗಿ ಆಯ್ಕೆ ಮಾಡಿತ್ತು. ಬಳಿಕ ಡಿ.31ರಂದು ಭೂಸೇನಾ ಮುಖ್ಯಸ್ಥ ಹುದ್ದೆಯಿಂದ ನಿವೃತ್ತಿ ಹೊಂದಿದ್ದ ಬಿಪಿನ್ ರಾವತ್ ಅವರು ಇಂದು ದೇಶದ ಮೊದಲ ಸಿಡಿಎಸ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ.