ನವದೆಹಲಿ : ಹೊಸ ವರ್ಷ ಆರಂಭವಾಗುತ್ತಿದ್ದಂತೆ ಕೇಂದ್ರ ಸರ್ಕಾರ ಎಲ್‍ಪಿಜಿ ಗ್ರಾಹಕರಿಗೆ ಶಾಕ್ ನೀಡಿದ್ದು, ಒಂದು ಗ್ಯಾಸ್ ಸಿಲಿಂಡರ್‍ಗೆ ರೂ.19 ರಷ್ಟು ಹೆಚ್ಚಿಸಿದೆ. ಕೇಂದ್ರ ಸರ್ಕಾರ ಕಳೆದ ಐದು ತಿಂಗಳಿಂದ ಹಂತ ಹಂತವಾಗಿ ಎಲ್‍ಪಿಜಿ ದರವನ್ನು ರೂ.319 ರಷ್ಟು ಹೆಚ್ಚಿಸಿದ್ದು, ಸಬ್ಸಿಡಿ ರಹಿತ ಗ್ಯಾಸ್ 14.2 ಕೆಜಿ ಇರುವ ಎಲ್ಲಾ ಸಿಲಿಂಡರ್‍ಗೂ 19 ರೂ. ಹೆಚ್ಚಿಸುವ ಮೂಲಕ ಮೊದಲು ರೂ. 695 ರಷ್ಟಿದ್ದ ದರ ಈಗಾ 714 ರೂ ಅಷ್ಟು ತಲುಪಿದೆ. ಸದ್ಯ ದೆಹಲಿಯಲ್ಲಿ ಸಬ್ಸಿಡಿ ರಹಿತ ಒಂದು ಎಲ್ಪಿಜಿ ಸಿಲಿಂಡರ್ ಬೆಲೆ 714 ರೂ.ಗಳಿದ್ದರೆ, ಮುಂಬೈನಲ್ಲಿ 684 ರೂ.ಇದೆ. ಡಿಸೆಂಬರ್ ತಿಂಗಳಿನಲ್ಲಿ ಎಲ್ಪಿಜಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ 695 ರೂ ಇತ್ತು. ಮುಂಬೈನಲ್ಲಿ 665 ರೂ. ಇತ್ತು. ಕೋಲ್ಕತ್ತಾ ಮತ್ತು ಚೆನ್ನೈನಲ್ಲಿ ಕೂಡ ಸಬ್ಸಿಡಿ ರಹಿತ ಎಲ್ಪಿಜಿ ಗ್ಯಾಸ್ ಬೆಲೆಯಲ್ಲಿ ಏರಿಕೆಯಾಗಿದೆ. ಕೋಲ್ಕತ್ತಾದಲ್ಲಿ ಗ್ಯಾಸ್ ಬೆಲೆ 21.5 ರೂ. ಏರಿಕೆಯಾದರೆ, ಚೆನ್ನೈನಲ್ಲಿ 20 ರೂ. ಹೆಚ್ಚಳವಾಗಿದೆ. ಕೋಲ್ಕತ್ತಾದಲ್ಲಿ ಪ್ರತಿ ಎಲ್ಪಿಜಿ ಗ್ಯಾಸ್ ಬೆಲೆ 747 ರೂ ಇದ್ದರೆ, ಚೆನ್ನೈನಲ್ಲಿ 734 ರೂ.ಇದೆ. ಅಲ್ಲದೇ ವೈಮಾನಿಕ ಇಂಧನ ದರದಲ್ಲೂ 2.6ರಷ್ಟು ಹೆಚ್ಚಿಸಿ ಆದೇಶ ಹೊರಡಿಸಿದೆ.










