ಬೆಂಗಳೂರು : ಓಮಿಕ್ರಾನ್ ಬಗ್ಗೆ ಯಾವುದೇ ಆತಂಕ ಬೇಡ. ಎರಡು ಡೋಸ್ ಕೊವಿಡ್ ಲಸಿಕೆ ಪಡೆದವರ ಮೇಲೆ ಓಮಿಕ್ರಾನ್ ಪ್ರಭಾವ ಕಡಿಮೆ ಇರುತ್ತೆ. ಕೊರೊನಾ ಮೂರನೇ ಅಲೆ ದೀರ್ಘ ಕಾಲ ಇರುವುದಿಲ್ಲ. ಬೇಗ ಮುಕ್ತಾಯ ಆಗುತ್ತೆ. ಹೀಗಾಗಿ ಕನಿಷ್ಠ 4-6 ವಾರ ಜನ ಎಚ್ಚರಿಕೆ ವಹಿಸಬೇಕು. ಓಮಿಕ್ರಾನ್ ಶ್ವಾಸಕೋಶಕ್ಕೆ ಹೋಗೋದು ಕಡಿಮೆ. ಗಂಟಲಲ್ಲಿ ಮಾತ್ರ ಇದು ಇರುತ್ತೆ. ಹೀಗಾಗಿ ಯಾರು ಆತಂಕ ಪಡಬೇಡಿ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ತಿಳಿಸಿದ್ದಾರೆ.
15-18 ವಯಸ್ಕರಿಗೆ ನಿನ್ನೆ 3 ಲಕ್ಷ 50 ಸಾವಿರ ಲಸಿಕೆ ಕೊಟ್ಟಿದ್ದೇವೆ. ದೇಶದಲ್ಲಿ ಲಸಿಕೆ ನಿಡೋದ್ರಲ್ಲಿ 3ನೇ ಸ್ಥಾನದಲ್ಲಿ ಇದ್ದೇವೆ. ಈಗಾಗಲೇ 25% ಲಸಿಕೆ ಮಕ್ಕಳಿಗೆ ಕೊಡಲಾಗಿದೆ. 28 ದಿನಗಳು ಆದ ಮೇಲೆ ಮೊದಲ ಡೋಸ್ ಪಡೆದವರಿಗೆ ಎರಡನೇ ಡೋಸ್ ಕೊಡುತ್ತೇವೆ. ಕೋವ್ಯಾಕ್ಸಿನ್ ಮಾತ್ರ ಎರಡನೇ ಡೋಸ್ ಲಸಿಕೆ ಕೊಡಲಾಗುತ್ತೆ. ಲಸಿಕೆ ನೀಡಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗುತ್ತೆ. 10-15 ದಿನಗಳಲ್ಲಿ ಎಲ್ಲಾ ಮಕ್ಕಳಿಗೂ ಮೊದಲ ಡೋಸ್ ಲಸಿಕೆ ಕೊಡುವ ಕೆಲಸ ಮಾಡುತ್ತೇವೆ ಎಂದರು.
60 ವರ್ಷ ಮೇಲ್ಪಟ್ಟವರಿಗೆ 3ನೇ ಡೋಸ್ ಜನವರಿ 10 ರಿಂದ ಕೊಡುತ್ತೇವೆ. ಕೊರೊನಾ ವಾರಿಯರ್ಸ್ ಗೆ 3ನೇ ಡೋಸ್ ಲಸಿಕೆ ಕೊಡ್ತೀವಿ. ಫ್ರಂಟ್ ಲೈನ್ ವಾರಿಯರ್ಸ್ ಗೂ 3ನೇ ಡೋಸ್ ಲಸಿಕೆ ಕೊಡುತ್ತೇವೆ ಎಂದು ತಿಳಿಸಿದ ಸುಧಾಕರ್ ಜನರು, ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳ ಸಹಕಾರ ಮುಖ್ಯ. ಕಾಂಗ್ರೆಸ್ ಗೆ ಜನರ ಹಿತ ಕಾಪಾಡುವ ಮನಸ್ಸು ಇದೆ ಅಂತ ಭಾವಿಸುತ್ತೇನೆ. ಹೀಗಾಗಿ ಪಾದಯಾತ್ರೆ ಮಾಡಬೇಕಾ ಅಂತ ಯೋಚನೆ ಮಾಡಲಿ. ಮಹಾರಾಷ್ಟ್ರ ಸೇರಿದಂತೆ ಅನೇಕ ಕಡೆ ಏನ್ ಆಗಿದೆ ಅಂತ ಎಲ್ಲರಿಗೂ ಗೊತ್ತು. ಇಂತಹ ಸಮಯದಲ್ಲಿ ಹೇಗೆ ನಡೆದುಕೊಳ್ಳಬೇಕು ಅಂತ ಅವರು ಅರ್ಥ ಮಾಡಕೊಳ್ಳಬೇಕು. ಜನರು ಎಲ್ಲಾ ನೋಡುತ್ತಿದ್ದಾರೆ. ಅವರು ಹಠ ಮುಂದುವರಿಸಿದರೆ ಕಾನೂನು ಪ್ರಕಾರ ಕ್ರಮ ಆಗುತ್ತೆ ಎಂದು ಹೇಳಿದ್ದಾರೆ.










