ಚಿಕ್ಕಬಳ್ಳಾಪುರ : ಮತ್ತೆ ಕಂಪಿಸಿದ ಭೂಮಿ -2.6 ತೀವ್ರತೆ ದಾಖಲು…

67
firstsuddi

ಚಿಕ್ಕಬಳ್ಳಾಪುರ : ತಾಲೂಕಿನ ವಿವಿಧೆಡೆ ಮತ್ತೆ ಭೂಕಂಪದ ಅನುಭವವಾಗಿದ್ದು, ಜನರು ಮತ್ತೊಮ್ಮೆ ಬೆಚ್ಚಿಬಿದ್ದಿದ್ದಾರೆ.

ತಾಲೂಕಿನ ಶೆಟ್ಟಿಗೇರೆ, ಗೊಲ್ಲಹಳ್ಳಿ, ಅಡ್ಡಗಲ್, ಬೀರಗಾನಹಳ್ಳಿ, ಸೇರಿದಂತೆ ಹಲವು ಗ್ರಾಮಗಳ ಸುತ್ತಮುತ್ತಲ ಹಳ್ಳಿಗಳಲ್ಲಿ ಇಂದು ಮುಂಜಾನೆ 3 ಗಂಟೆಗೆ ಸುಮಾರು 3 ಸೆಂಕೆಡ್ ಗಳ ಕಾಲ 2.6 ತೀವ್ರತೆಯಲ್ಲಿ ಭೂಮಿ ಕಂಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದ ಭಯಭೀತರಾದ ಗ್ರಾಮಸ್ಥರು ಮನೆಯ ಒಳಗಡೆ ಇರಲು ಹಿಂದೇಟು ಹಾಕಿದ್ದಾರೆ.

ಕಳೆದ ತಿಂಗಳು ಇವೇ ಗ್ರಾಮಗಳಲ್ಲಿ ಭೂಕಂಪ ಸಂಭವಿಸಿತ್ತು. ಸಾಕಷ್ಟು ಮನೆಗಳು ಬಿರುಕು ಬಿಟ್ಟಿದ್ದು, ಗ್ರಾಮಸ್ಥರು ಭಯಭೀತರಾಗಿದ್ದರು.