ಮೂಡಿಗೆರೆ: ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ವರ್ಷಿಣಿ .ಜಿ. ರಾಜ್ 625ಕ್ಕೆ 613 (98.8%) ಅಂಕ ಪಡೆದಿದ್ದಾರೆ.
ನಳಂದ ಶಾಲೆಯ ವಿದ್ಯಾರ್ಥಿನಿ ಆಗಿರುವ ವರ್ಷಿಣಿ .ಜಿ. ರಾಜ್ ಶಾಲೆಗೆ ಮೊದಲನೇ ಸ್ಥಾನ ಹಾಗೂ ತಾಲೂಕಿಗೆ ಐದನೇ ಸ್ಥಾನ ಪಡೆದಿದ್ದಾರೆ. ತಂದೆ ಗುರುರಾಜ್ ಮೂಡಿಗೆರೆ ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ತಾಯಿ ರೂಪ ಮೂಡಿಗೆರೆ ಎಂಜಿಎಂ ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.










