ಐಎಎಸ್ ಅಧಿಕಾರಿ ಆಕಾಶ್ ಶಂಕರ್ ವಿರುದ್ಧ ದೂರು ದಾಖಲಿಸಿದ ಪತ್ನಿ…

61
firstsuddi

ಬೆಂಗಳೂರು: ಐಎಎಸ್ ಅಧಿಕಾರಿ ಆಕಾಶ್ ಶಂಕರ್ ವಿರುದ್ಧ ಅವರ ಪತ್ನಿ ಡಾ. ವಂದನಾ ಅವರು ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಟ್ರಾಫಿಕಿಂಗ್ ಆಫ್ ಖಾಕೀಸ್ ಡಾಟರ್ ಹಾಗೂ ಟ್ರಾಫಿಕರ್ ಆಫ್ ಡಾಕ್ಟರ್ ವಂದನಾ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ ಅಂತಾ ಆರೋಪಿಸಿ ನಿವೃತ್ತ ಐಪಿಎಸ್ ಅಧಿಕಾರಿ ಮಗಳು ಡಾ. ವಂದನಾ ಅವರು ತಮ್ಮ ಪತಿ ಹಾಗೂ ಹಾಲಿ ಐಎಎಸ್ ಅಧಿಕಾರಿಯಾಗಿರುವ ಆಕಾಶ್ ಶಂಕರ್ ವಿರುದ್ಧ ದೂರು ದಾಖಲಿಸಿದ್ದಾರೆ.

ಪತಿ ಆಕಾಶ್ ಶಂಕರ್ ಅಲ್ಲದೆ ಸಹೋದರ ವಿಕಾಸ್ ಶಂಕರ್, ಪತ್ನಿ ಚೇತನಾ ವಿಕಾಸ್, ಐಸಿರಿ ಶಿವಕುಮಾರ್ ಎಂಬವರ ಮೇಲೆಯೂ ವಂದನಾ ದೂರು ನೀಡಿದ್ದಾರೆ.

ಡಾ. ವಂದನಾ ಹಾಗೂ ಐಎಎಸ್ ಅಧಿಕಾರಿ ಆಕಾಶ್ 2022ರಲ್ಲಿ ಮದುವೆಯಾಗಿದ್ದು ಕೆಲ ತಿಂಗಳ ಹಿಂದಷ್ಟೇ ವಂದನಾ ಅವರು ಪತಿ ವಿರುದ್ಧ ಆರೋಪ ಮಾಡಿ ದೂರು ದಾಖಲಿಸಿದ್ದರು. ಹೆಚ್ಚು ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದಾರೆ. ಅದಕ್ಕೆ ಒಪ್ಪದಿದ್ದಕ್ಕೆ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ವಂದನಾ ಈ ಹಿಂದೆ ದೂರು ದಾಖಲಿಸಿದ್ದರು. ಆದರೆ ಈಗ ಅದೇ ವರದಕ್ಷಿಣೆ ಕೇಸ್ ಸಂಬಂಧ ಸುಳ್ಳು ಆರೋಪ ಎಂದು ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿದ್ದಾರೆ. ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.

ಈ ಸಂಬಂಧ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಐಎಎಸ್ ಅಧಿಕಾರಿ ಆಕಾಶ್ ಶಂಕರ್ ವಿರುದ್ಧ ಎಫ್ಐಆರ್ ದಾಖಲಾಗಿದೆ.