ಪತ್ನಿ ಎದುರೇ ಪತಿಯ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – ಖತರ್ನಾಕ್ ಹೆಂಡತಿ ಅರೆಸ್ಟ್…

76
firstsuddi

ಬೆಳಗಾವಿ: ಭೀಮನ ಅಮಾವಾಸ್ಯೆ ದಿನದಂದು ಜಿಲ್ಲೆಯ ಮೂಡಲಗಿ ತಾಲೂಕಿನ ವಡೇರಹಟ್ಟಿ ಗ್ರಾಮದ ಬನಸಿದ್ದೇಶ್ವರ ದೇವಸ್ಥಾನದಲ್ಲಿ ನಡೆದಿದ್ದ ಭೀಕರ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಖತರ್ನಾಕ್ ಹೆಂಡತಿ ಪ್ರಿಯಾಂಕಾ ಜಗಮತ್ತಿಯನ್ನ ಮೂಡಲಗಿ ಪೊಲೀಸರು ಬಂಧಿಸಿದ್ದಾರೆ.

ನಿನ್ನೆ ಭೀಮನ ಅಮವಾಸ್ಯೆಯಾಗಿದ್ದರಿಂದ ಶಂಕರ್ ಜಗಮತ್ತಿ ಮತ್ತು ಪ್ರಿಯಾಂಕಾ ಜಗಮತ್ತಿ ದಂಪತಿ ಬನಸಿದ್ದೇಶ್ವರ ದೇವಸ್ಥಾನಕ್ಕೆ ಬಂದಿದ್ದರು. ಈ ವೇಳೆ ಪತ್ನಿಯ ಕಣ್ಣೆದುರೇ ದುಷ್ಕರ್ಮಿಗಳು ಪತಿಯ ಹತ್ಯೆ ಮಾಡಿದ್ದು, ಸ್ಥಳದಲ್ಲೇ ಶಂಕರ್ ಜಗಮತ್ತಿ ಸಾವನ್ನಪ್ಪಿದ್ದರು.

ಕೊಲೆ ಪ್ರಕರಣದಲ್ಲಿ ಆರೋಪಿಗಳಾದ ಪ್ರಿಯಾಂಕಾಳ ಪ್ರಿಯಕರ ಶ್ರೀಧರ್ ತಳವಾರ(21), ಶಂಕರ್ ಪತ್ನಿ ಪ್ರಿಯಾಂಕ ಜಗಮತ್ತಿಯನ್ನು (21) ಬಂಧಿಸಲಾಗಿದೆ. ಮೊದಲೇ ಪಕ್ಕಾ ಪ್ಲಾನ್ ಮಾಡಿಕೊಂಡಿದ್ದ ಪ್ರಿಯಾಂಕಾ ಮನೆ ಬಿಡುವ ವೇಳೆ ಪ್ರಿಯಕರ ಶ್ರೀಧರ್ ಗೆ ಕರೆ ಮಾಡಿ ದೇವಸ್ಥಾನಕ್ಕೆ ಬಂದಿದ್ದಳು. ದೇವರ ದರ್ಶನ ಮುಗಿಸಿಕೊಂಡು ವಾಪಾಸ್ ಬರುತ್ತಿದ್ದಂತೆ ಆರೋಪಿ ಶ್ರೀಧರ್ ಪ್ರಿಯಾಂಕಾ ಪತಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದನು.

ಕೊಲೆ ಬಳಿಕ ಪ್ರಿಯಾಂಕಾ ತನಗೆ ಏನೂ ಗೊತ್ತಿಲ್ಲದಂತೆ ಡ್ರಾಮಾ ಮಾಡಿದ್ದಳು. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಮೂಡಲಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಪ್ರಾಥಮಿಕ ತನಿಖೆಯಲ್ಲಿ ಶ್ರೀಧರ್ ಮತ್ತು ಪ್ರಿಯಾಂಕಾ ನಡುವೆ ಸಂಬಂಧ ಇರುವುದು ಬೆಳಕಿಗೆ ಬಂದಿದೆ. ಈ ವೇಳೆ ಕಾಲ್ ರೆಕಾರ್ಡ್, ಕಾಲ್ ಡಿಟೈಲ್ಸ್ ಹೀಗೆ ಟೆಕ್ನಿಕಲ್ ಎವಿಡೆನ್ಸ್ ಆಧರಿಸಿ ಪ್ರಿಯಾಂಕಾ ಹಾಗೂ ಆಕೆಯ ಪ್ರಿಯಕರ ಶ್ರೀಧರ್​ನನ್ನು ಬಂಧಿಸಿದ್ದಾರೆ.

ಘಟನೆ ಕುರಿತು ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.