ಬೆಂಗಳೂರು : ಐಸಿಸ್ ಉಗ್ರ ಸಂಘಟನೆ ಜೊತೆ ಲಿಂಕ್ ಹೊಂದಿದ್ದ ಎನ್ನಲಾದ ವ್ಯಕ್ತಿಯೋರ್ವನನ್ನು ಎನ್ಐಎ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರು ಮೂಲದ ಮುಹಮ್ಮದ್ ತಾಖಿರ್ (33) ಬಂಧಿತ ಆರೋಪಿ. ಐಸಿಸ್ ಸೇರಿದಂತೆ ಅಂತಾರಾಷ್ಟ್ರೀಯ ಉಗ್ರ ಸಂಘಟನೆಗಳಿಗೆ ಸೇರಲು ಭಾರತೀಯ ಯುವಕರನ್ನ ಪ್ರಚೋದಿಸಿ ಬಳಿಕ ಅವರನ್ನು ಅಕ್ರಮವಾಗಿ ಸಿರಿಯಾಗೆ ಕಳುಹಿಸುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ಇದೇ ಏಪ್ರಿಲ್ ನಲ್ಲಿ ಈತನ ಇಬ್ಬರು ಸಹಚರರಾದ ಅಹಮದ್ ಅಬ್ದುಲ್ ಖಾದರ್ ಹಾಗೂ ಇರ್ಫಾನ್ ನಾಸಿರ್ ಎಂಬುವರನ್ನು ಎನ್ಐಎ ಬಂಧಿಸಿ ಅವರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿತ್ತು. ಈ ಪ್ರಕರಣದ ತನಿಖೆ ವೇಳೆ ಮೊಹಮ್ಮದ್ ತಾಖಿರ್ ಲಿಂಕ್ ಹೊಂದಿರುವುದು ಪತ್ತೆಯಾಗಿತ್ತು.










