ಒಂದೇ ದಿನ ಮಹಾಮಾರಿ ಕೊರೊನಾಗೆ ತಾಯಿ-ಮಗ ಬಲಿ..!

73
firstsuddi

ಕಲಬುರುಗಿ : ಮಹಾಮಾರಿ ಕೊರೊನಾಗೆ ಒಂದೇ ದಿನ ತಾಯಿ, ಮಗ ಇಬ್ಬರು ಬಲಿಯಾಗಿರುವ ಘಟನೆ ಚಿತ್ತಾಪುರ ತಾಲ್ಲೂಕಿನ ವಾಡಿ ಪಟ್ಟಣದಲ್ಲಿ ನಡೆದಿದೆ.

ವಾಡಿ ಪಟ್ಟಣದ ಆರ್‌ ಸಿ ತಾಂಡಾ ನಿವಾಸಿಗಳಾಗಿದ್ದ ಚಾಂದಿಬಾಯಿ ನಾಯಕ್ (74) ಹಾಗೂ ಭಜನ್ ನಾಯಕ್ (32) ಕೊರೊನಾಗೆ ಬಲಿಯಾದ ತಾಯಿ-ಮಗ. ಕಲಬುರಗಿ ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಬೆಳಗ್ಗೆ ಮಗ ಭಜನ್ ಮೃತಪಟ್ಟರೆ, ನಿನ್ನೆ ಸಂಜೆ ತಾಯಿ ಚಾಂದಿಬಾಯಿ ಸಾವನ್ನಪ್ಪಿದ್ದಾರೆ. ದುರಂತವೆಂದರೆ ಕಳೆದ ಒಂಬತ್ತು ದಿನಗಳ ಹಿಂದಷ್ಟೆ ಚಾಂದಿಬಾಯಿ ಅವರ ಹಿರಿಯ ಪುತ್ರ, ವಾಡಿ ಪುರಸಭೆ ಸದಸ್ಯ ಪ್ರಕಾಶ್ ನಾಯಕ್ (46) ಸಹ ಕೊರೊನಾಗೆ ಬಲಿಯಾಗಿದ್ದರು. ಅಲ್ಲದೇ ಇನ್ನೊರ್ವ ಪುತ್ರ ಮಹೇಶ್ ನಾಯಕ್ ಎಂಬುವರು ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಡೀ ಕುಟುಂಬ ಇದೀಗ ದುಃಖದ ಮಡುವಿನಲ್ಲಿ ಮುಳುಗಿದೆ.