ಒಡಿಶಾ ರೈಲು ದುರಂತದಲ್ಲಿ ಬದುಕುಳಿದಿದ್ದ ಚಿಕ್ಕಮಗಳೂರಿನ ಯಾತ್ರಿಕ ಹೃದಯಾಘಾತದಿಂದ ಸಾವು…

61
firstsuddi

ಚಿಕ್ಕಮಗಳೂರು: ಒಡಿಶಾ ತ್ರಿವಳಿ ರೈಲು ದುರಂತದಲ್ಲಿ ಸುಮೇದ್ ಸಿಖರ್ಜಿ ಯಾತ್ರೆಗೆಂದು ಹೊರಟಿದ್ದ 110 ಯಾತ್ರಿಕರು ಬದುಕುಳಿದಿದ್ದು, ಈ ಪೈಕಿ ಜಿಲ್ಲೆಯ ಒಬ್ಬ ಯಾತ್ರಿಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಜಿಲ್ಲೆಯ ಕಳಸ ತಾಲೂಕಿನ ಕಳಕೋಡು ನಿವಾಸಿ ಧರ್ಮಪಾಲಯ್ಯ (72) ಮೃತ ದುರ್ದೈವಿ. ಒಡಿಶಾದಲ್ಲಿ ತ್ರಿವಳಿ ರೈಲು ದುರಂತ ನಡೆದ ಸಂದರ್ಭದಲ್ಲಿ ಸುಮೇದ್ ಸಿಖರ್ಜಿ ಯಾತ್ರೆಗೆಂದು ಬೆಂಗಳೂರಿನಿಂದ ರೈಲಿನಲ್ಲಿ ಹೊರಟ್ಟಿದ್ದ 110 ಕನ್ನಡಿಗರೂ ಬದುಕುಳಿದಿದ್ದರು.

ರೈಲು ಅಪಘಾತವಾದ ಬಳಿಕ ಸುಮೇದ್ ಶಿಖರ್ಜಿಗೆ ತೆರಳಿದ ಅವರು, ಯಾತ್ರೆ ಮುಗಿಸಿ ಹಿಂದಿರುಗುವಾಗ ಉತ್ತರ ಪ್ರದೇಶದ ಮಿರ್ಜಾಪುರ ರೈಲ್ವೇ ಸ್ಟೆಷನ್ ನಲ್ಲಿ ಹೃದಯಾಘಾತದಿಂದಾಗಿ ಸಾವನ್ನಪ್ಪಿದ್ದಾರೆ. ಮಿರ್ಜಾಪುರ ಸರ್ಕಾರಿ ಆಸ್ಪತ್ರೆ ಬಳಿ ಯಾತ್ರಿಕರು ಮೃತ ದೇಹಕ್ಕಾಗಿ ಕಾಯುತ್ತಿದ್ದಾರೆ.