ಓಲಾ, ಉಬರ್ ಆಟೋಗಳಿಗೆ ದರ ನಿಗದಿ…

57
firstsuddi

ಬೆಂಗಳೂರು : ಸಾರಿಗೆ ಇಲಾಖೆ ಓಲಾ, ಉಬರ್ ಹಾಗೂ ರಾಪಿಡೋ ಆಟೋಗಳಿಗೆ ನೂತನ ದರ ನಿಗದಿ ಮಾಡಿ ಆದೇಶ ಹೊರಡಿಸಿದೆ.

ಹೈಕೋರ್ಟ್ ಸೂಚನೆಯಂತೆ ಸಭೆ ನಡೆಸಿ ಸಾರಿಗೆ ಇಲಾಖೆ ಕನಿಷ್ಠ ಶುಲ್ಕದ ಜೊತೆ ಶೇ.5 ಸೇವಾ ಶುಲ್ಕ ಅಥವಾ ಕಮಿಷನ್ ದರ ನಿಗದಿ ಮಾಡಿದೆ. ಮಿನಿಮಮ್ ಚಾರ್ಜ್ 30, 40, 60 ಇದ್ರು ಅದರ ಜೊತೆಗೆ +5% ಮಾತ್ರ ಹೆಚ್ಚಿಸಲಾಗಿದೆ.

ಓಲಾ, ಉಬರ್ ಹಾಗೂ ರಾಪಿಡೋ ಆಟೋಗಳು ಪ್ರಯಾಣಿಕರ ಬಳಿ ದುಪ್ಪಟ್ಟು ಹಣ ವಸೂಲಿ ಮಾಡುತ್ತಿವೆ ಎಂಬ ಆರೋಪ ಕೇಳಿಬಂದ ಹಿನ್ನೆಲೆ ಬೆಲೆ ನಿಗದಿ ಮಾಡಲಾಗಿದೆ.

ಆ್ಯಪ್ ಆಧಾರಿತ ಸೇವೆ ಓಲಾ, ಉಬರ್ ಆಟೋ ಬಳಕೆಗೆ ದರ ನಿಗದಿ ಮಾಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ನ.25ರ ಒಳಗಡೆ ದರವನ್ನು ನಿರ್ಧಾರ ಮಾಡಿ ತಿಳಿಸಲಾಗುವುದು ಎಂದು ಸರ್ಕಾರ ಹೇಳಿತ್ತು.