ಕಡಲ್ಗಳ್ಳರಿಂದ ಅಪಹರಣಕ್ಕೊಳಗಾಗಿದ್ದ 19 ಪಾಕ್ ನಾವಿಕರನ್ನು ರಕ್ಷಿಸಿದ ಭಾರತೀಯ ನೌಕಾಪಡೆ…

38
firstsuddi

ನವದೆಹಲಿ: ಕಡಲ್ಗಳ್ಳರಿಂದ ಅಪಹರಣಕ್ಕೆ ಒಳಗಾಗಿದ್ದ 19 ಪಾಕ್ ನಾವಿಕರನ್ನು ಭಾರತೀಯ ನೌಕಾಪಡೆ ರಕ್ಷಿಸಿದೆ.

ಸೊಮಾಲಿಯಾದ ಪೂರ್ವ ಕರಾವಳಿಯಲ್ಲಿ ಕಡಲ್ಗಳ್ಳರು ಮೀನುಗಾರಿಕಾ ಹಡಗನ್ನು ಅಪಹರಿಸಿದ್ದರು. ಭಾರತೀಯ ಯುದ್ಧನೌಕೆ INS ಸುಮಿತ್ರಾ, 19 ಪಾಕಿಸ್ತಾನಿ ನಾವಿಕರನ್ನು ರಕ್ಷಿಸಿದೆ. 36 ಗಂಟೆಗಳಲ್ಲಿ ಯುದ್ಧನೌಕೆ ನಡೆಸಿದ 2ನೇ ಕಡಲ್ಗಳ್ಳತನ ವಿರೋಧಿ ಕಾರ್ಯಾಚರಣೆ ಇದಾಗಿದೆ ಎಂದು ಭಾರತೀಯ ನೌಕಾಪಡೆ ತಿಳಿಸಿದೆ.

11 ಶಸ್ತ್ರಸಜ್ಜಿತ ಕಡಲ್ಗಳ್ಳರು ಇರಾನಿ ಧ್ವಜವುಳ್ಳ ಹಡಗನ್ನು ಅಪಹರಿಸಿದ್ದು, 19 ಪಾಕಿಸ್ತಾನ ನಾವಿಕರನ್ನು ಒತ್ತೆಯಾಳುಗಳಾಗಿ ಇರಿಸಿದರು. ಈ ಬಗ್ಗೆ ಮಾಹಿತಿ ಪಡೆದ ಭಾರತೀಯ ಯುದ್ಧನೌಕೆ ಕಡಲ್ಗಳ್ಳರು ವಶದಲ್ಲಿದ್ದ ಹಡಗನ್ನು ತಡೆದು, 19 ಪಾಕಿಸ್ತಾನ ಒತ್ತೆಯಾಳುಗಳನ್ನು ರಕ್ಷಿಸಿದ್ದಾರೆ.

ಮತ್ತೊಂದು ಕಡೆ ಅರಬ್ಬೀ ಸಮುದ್ರದ ಸೊಮಾಲಿ ಕಡಲ್ಗಳ್ಳರಿಂದ ಅಪಹರಣಕ್ಕೊಳಗಾಗಿದ್ದ ಮೀನುಗಾರಿಕಾ ಹಡಗು ಇಮಾನ್​​​ ನನ್ನು ಭಾರತೀಯ ನೌಕಾಪಡೆಯ ಯುದ್ಧನೌಕೆ ಐಎನ್ಎಸ್ ಸುಮಿತ್ರಾ ರಕ್ಷಣೆ ಮಾಡಿದೆ. ಈ ಹಡಗಿನಲ್ಲಿ 17 ಜನ ಭಾರತೀಯ ಮೀನುಗಾರರಿದ್ದರು ಎಂದು ಹೇಳಲಾಗಿದೆ. ಈ ಪ್ರದೇಶದಲ್ಲಿ ಭಾರತೀಯ ನೌಕಪಡೆಗಳು ಭದ್ರತೆಯನ್ನು ಹೆಚ್ಚಿಸಿದ್ದು, ಭಾರತಕ್ಕೆ ಹೋಗುವ ವ್ಯಾಪಾರಿ ಹಡಗುಗಳ ಮೇಲೆ ಹೆಚ್ಚಿನ ಕಾಳಜಿಯನ್ನು ವಹಿಸಲಾಗಿದೆ.

INS ಸುಮಿತ್ರಾ, ಭಾರತೀಯ ನೌಕಾಪಡೆಯ ಸ್ಥಳೀಯ ಕಡಲಾಚೆಯ ಗಸ್ತು ನೌಕೆಯಾಗಿದೆ. ಸೋಮಾಲಿಯಾ ಮತ್ತು ಗಲ್ಫ್ ಆಫ್ ಅಡೆನ್‌ನ ಪೂರ್ವದಲ್ಲಿ ಕಡಲ್ಗಳ್ಳತನ ಮತ್ತು ಕಡಲ ಭದ್ರತಾ ಕಾರ್ಯಾಚರಣೆಗಳಿಗಾಗಿ ಇದನ್ನು ನಿಯೋಜಿಸಲಾಗಿದೆ.