ವಿಜಯನಗರ: ಕಣ್ಣು ಕಾಣದ 58 ವರ್ಷದ ವೃದ್ಧೆಯ ಮೇಲೆ ಕಾಮುಕನೊಬ್ಬ ಅತ್ಯಾಚಾರವೆಸಗಿದ ಘಟನೆ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ವ್ಯಾಸಪುರ ತಾಂಡದಲ್ಲಿ ನಡೆದಿದೆ.
ಲೋಕೇಶ ನಾಯ್ಕ್ ಎಂಬಾತನೇ ವೃದ್ಧೆಯ ಮೇಲೆ ಕಾಮತೃಷೆ ತೀರಿಸಿಕೊಂಡ ಕಾಮುಕನಾಗಿದ್ದಾನೆ. ವೃದ್ಧೆಯ ಮೇಲೆ ಮೇ.30 ರಂದು ಅತ್ಯಾಚಾರವೆಸಗಿ ಆರೋಪಿ ಲೋಕೇಶ ನಾಯ್ಕ್ ಪರಾರಿಯಾಗಿದ್ದ, ಮದುವೆಯಾಗಿ ಮಕ್ಕಳಿದ್ರೂ, ತಾಯಿ ವಯಸ್ಸಿನ ವೃದ್ಧೆಯ ಮೇಲೆ ಲೋಕೇಶ ನಾಯ್ಕ್ ಅತ್ಯಾಚಾರವೆಸಗಿದ್ದಾನೆ.
ಲೋಕೇಶನ ಕುಕೃತ್ಯದಿಂದ ತೀವ್ರವಾಗಿ ಗಾಯಗೊಂಡಿದ್ದ ಸಂತ್ರಸ್ತ ವೃದ್ದೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ ಊರಿಗೆ ಮರಳಿದ ವೃದ್ದೆಯು ವಯಸ್ಸಾದ ತನಗೇ ಹಿಂಗಾಯ್ತಲ್ಲ ಎಂದು ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಣ್ಣು ಕಾಣದ ವೃದ್ದೆಯ ಮೇಲೆ ಅತ್ಯಾಚಾರವೆಸಗಿರುವ ಕಾಮುಕ ಲೋಕೇಶ ನಾಯ್ಕ್‌ನನ್ನು ಪೊಲೀಸರು ಈಗಾಗಲೇ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಗ್ರಾಮಸ್ಥರು ಮಾತ್ರ, ಹೇಯ ಕೃತ್ಯ ಎಸಗಿರುವ ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.










