ಕನ್ನಡಿಗರ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿ ಶಿವಸೇನೆ ಪುಂಡರ ಅಟ್ಟಹಾಸ…

78
firstsuddi

ಸಾಂಗ್ಲಿ(ಮಹಾರಾಷ್ಟ್ರ): ಬೆಂಗಳೂರಿನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ದುಷ್ಕರ್ಮಿಗಳು ಅವಮಾನ ಮಾಡಿರುವ ಘಟನೆ ಹಿನ್ನೆಲೆ ಆಕ್ರೋಶಗೊಂಡ ಶಿವಸೇನಾ ಪುಂಡರು ಕನ್ನಡಿಗರ ಖಾಸಗಿ ವಾಹನ ಮತ್ತು ಅಂಗಡಿಗಳ ಮೇಲೆ ದಾಳಿ ನಡೆಸಿದ ಘಟನೆ ಮಹಾರಾಷ್ಟ್ರ ಸಾಂಗ್ಲಿ ಜಿಲ್ಲೆಯ ಮೀರಜ ಪಟ್ಟಣದಲ್ಲಿ ನಡೆದಿದೆ.

ನಗರದಲ್ಲಿ ಕನ್ನಡ ವ್ಯಾಪಾರಸ್ಥರ ಅಂಗಡಿಗಳ ಮೇಲೆ ಶಿವಸೇನಾ ಕಾರ್ಯಕರ್ತರು ದಾಳಿ ನಡೆಸಿ ಇಲ್ಲಿನ ಕನ್ನಡ ವ್ಯಾಪಾರಿಗಳ ಜಾಹೀರಾತು ಫಲಕಗಳನ್ನು ಒಡೆದು ಹಾಕುತ್ತಿದ್ದಾರೆ. ಮಹಾರಾಷ್ಟ್ರಕ್ಕೆ ಬರುವ ಕರ್ನಾಟಕದ ನಂಬರ್ ಪ್ಲೇಟ್ ಇರುವ ವಾಹನಗಳನ್ನು ತಡೆದು ಅವುಗಳ ಮೇಲೆ ಕಲ್ಲು ತೂರಾಟ ನಡೆಸಿ, ವಾಹನಗಳ ಮೇಲೆ ಜೈ ಮಹಾರಾಷ್ಟ್ರ ಎಂದು ಬರೆದಿದ್ದಾರೆ. ಹಿಂಸಾಚಾರಕ್ಕೆ ಇಳಿದ ಎಂಇಎಸ್ ಮತ್ತು ಶಿವಸೇನೆ ಕಾರ್ಯಕರ್ತರು ಕರ್ನಾಟಕದ ಗಡಿಭಾಗದಲ್ಲಿ ಉದ್ಧಟತನ ಪ್ರದರ್ಶಿಸಿದ್ದಾರೆ.