ಮಂಗಳೂರು : ನಗರದ ಮಲ್ಲೂರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ(ಪಿಡಿಒ) ಕರ್ತವ್ಯದಲ್ಲಿದ್ದ ವೇಳೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದ ನಾಲ್ವರು ಆರೋಪಿಗಳನ್ನು ನಗರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಫರಂಗಿಪೇಟೆ ನಿವಾಸಿ ಮುಹಮ್ಮದ್ ಹಿದಾಯತುಲ್ಲಾ (25), ಅಹ್ಮದ್ ಬಶೀಲ್ (30), ಅಬ್ದುಲ್ ಸಿದ್ದೀಕ್ (33) ಹಾಗೂ ಕುತ್ತಾರು ಮದನಿ ನಗರ ನಿವಾಸಿ ಅಬೂಬಕರ್ ಸಿದ್ದೀಕ್ (26) ಬಂಧಿತ ಆರೋಪಿಗಳು.
ಮೇ 25ರಂದು ಮಧ್ಯಾಹ್ನ ಮಲ್ಲೂರು ಗ್ರಾ.ಪಂ ರಸ್ತೆ ಬದಿಯಲ್ಲಿ ನಾಲ್ವರು ಯುವಕರು ಮಾಸ್ಕ್ ಧರಿಸದೆ ನಿಂತಿರುವುದನ್ನು ಗಮನಿಸಿದ ಪಿಡಿಒ ರಾಜೇಂದ್ರ ಶೆಟ್ಟಿ ಮಾಸ್ಕ್ ಧರಿಸುವಂತೆ ಅವರಿಗೆ ಸೂಚಿಸಿದ್ದಲ್ಲದೆ, ತನ್ನ ಮೊಬೈಲ್ ನಿಂದ ಫೋಟೋ ವೀಡಿಯೋ ತೆಗೆಯಲು ಮುಂದಾದಾಗ ಯುವಕರು ಹಲ್ಲೆ ನಡೆಸಿದ್ದಾರೆ.
ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನೆಯ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಇಂದು ಬೆಳಗ್ಗೆ ಪೊಲೀಸರು ಬಂಧಿಸಿದ್ದಾರೆ.










