ಕರ್ನಾಟಕದಲ್ಲಿ ಇಂದು 141 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆ-ಸೋಂಕಿತರ ಸಂಖ್ಯೆ 2,922ಕ್ಕೆ ಏರಿಕೆ…

166
firstsuddi

ಬೆಂಗಳೂರು : ರಾಜ್ಯದಲ್ಲಿ ಮಹಾಮಾರಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇಂದು ಒಂದೇ ದಿನ 141 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಈ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,922ಕ್ಕೆ ಏರಿಕೆಯಾಗಿದೆ. ಹಾಗೂ ಮಹಾಮಾರಿ ಕೊರೊನಾ ಸೋಂಕಿಗೆ ಇಂದು ಒಂದು ಬಲಿಯಾಗಿದ್ದು, ಮೃತರ ಸಂಖ್ಯೆ 49ಕ್ಕೆ ಏರಿಕೆಯಾಗಿದೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಬಿಡುಗಡೆಯಾದ ಹೆಲ್ತ್ ಬುಲೆಟಿನ್‍ನಲ್ಲಿ ಇಂದು ಬೆಂಗಳೂರು-33, ಯಾದಗಿರಿ-18, ದಕ್ಷಿಣ ಕನ್ನಡ-14, ಉಡುಪಿ-13, ಹಾಸನ-13, ವಿಜಯಪುರ-11, ಬೀದರ್-10, ಶಿವಮೊಗ್ಗ-6, ದಾವಣಗೆರೆ-4, ಹಾವೇರಿ-4, ಕೋಲಾರ-3, ಕಲಬುರಗಿ, ಮೈಸೂರು, ಉತ್ತರಕನ್ನಡ, ಧಾರವಾಡ, ಜಿಲ್ಲೆಯಲ್ಲಿ ತಲಾ 2 ಕೊರೊನಾ ಪ್ರಕರಣ. ಬೆಳಗಾವಿ, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ ಹಾಗೂ ತುಮಕೂರು ಜಿಲ್ಲೆಯಲ್ಲಿ ತಲಾ ಒಬ್ಬರಲ್ಲಿ ಸೋಂಕು ತಗುಲಿರುವುದು ದೃಢವಾಗಿದೆ. 141 ಮಂದಿ ಸೋಂಕಿತರ ಪೈಕಿ 90 ಮಂದಿ ಸೋಂಕಿತರು ಹೊರ ರಾಜ್ಯದಿಂದ ಬಂದಿದ್ದು, ಉಳಿದ ಸೋಂಕಿತರು ರಾಜ್ಯದ ಸೋಂಕಿತರ ಸಂಪರ್ಕದಲ್ಲಿದ್ದವರು ಎಂದು ತಿಳಿದು ಬಂದಿದೆ.