ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಬಸ್ ಸಂಚಾರ ಆರಂಭ…

59
firstsuddi

ಬೆಳಗಾವಿ : ಮಹಾರಾಷ್ಟ್ರ ಗಡಿಯಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಹಿನ್ನೆಲೆಯಲ್ಲಿ ಎಂದಿನಂತೆ ಮತ್ತೆ ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಬಸ್ ಗಳ ಸಂಚಾರ ಆರಂಭವಾಗಿದೆ.

ಗಡಿ ವಿವಾದ ಭುಗಿಲೆದ್ದ ಬಳಿಕ ಕೆಲ ಪುಂಡರು ಕರ್ನಾಟಕ ಬಸ್ ಗಳಿಗೆ ಮಸಿ ಬಳಿದು ಪುಂಡಾಟಿಕೆ ಮೆರೆದಿದ್ದರು. ಈ ಹಿನ್ನೆಲೆ ಮಹಾರಾಷ್ಟ್ರಕ್ಕೆ ತೆರಳುವ ಬಸ್ ಗಳ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಸದ್ಯ ಇಂದಿನಿಂದ ಮತ್ತೆ ಬಸ್ ಗಳ ಸಂಚಾರ ಪುನಾರಂಭ ಮಾಡಲಾಗಿದೆ.

ಎಂದಿನಂತೆ ಬಸ್ ಗಳು ಓಡಾಡುತ್ತಿದ್ದು, ಕೊಲ್ಲಾಪುರಕ್ಕೆ ತೆರಳುವ ಬಸ್ ಗಳು ನಗರದ ಹೊರವಲಯಗಳವರೆಗೆ ಮಾತ್ರ ಸಂಚಾರ ಮಾಡಲಿದ್ದು ಕೊಲ್ಲಾಪುರ ಹೊರವಲಯದ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರ ಮೇಲೆ ಪ್ರಯಾಣಿಕರ ಇಳಿಸಿ ವಾಪಸ್ ಕರ್ನಾಟಕಕ್ಕೆ ಬರಲಿವೆ.

ಕರ್ನಾಟಕದಿಂದ ಬಸ್ ಸಂಚಾರ ಆರಂಭವಾದರೂ ಮಹಾರಾಷ್ಟ್ರ ಸಾರಿಗೆ ಇಲಾಖೆಯಿಂದ ಕರ್ನಾಟಕಕ್ಕೆ ಇನ್ನೂ ಬಸ್ ಸಂಚಾರ ಪ್ರಾರಂಭವಾಗಿಲ್ಲ.