ಕರ್ನಾಟಕ ಪೊಲೀಸ್ ಇತಿಹಾಸದಲ್ಲೇ ಇದೇ ಮೊದಲ ಕೇಸ್ – ಡ್ರಗ್ಸ್ ಫ್ಯಾಕ್ಟರಿ ಮೇಲೆ ದಾಳಿ…

94
firstsuddi

ಬೆಂಗಳೂರು : ಕರ್ನಾಟಕ ಪೊಲೀಸ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸಿಸಿಬಿಯ ಆಂಟಿ ನಾರ್ಕೋಟಿಕ್ಸ್ ವಿಭಾಗದ ಅಧಿಕಾರಿಗಳ ತಂಡ ಡ್ರಗ್ಸ್ ತಯಾರಿಕಾ ಘಟಕದ ಮೇಲೆ ದಾಳಿ ಮಾಡುವಲ್ಲಿ ಯಶಸ್ವಿಯಾಗಿದೆ.

ಈವರೆಗೆ ಡ್ರಗ್ ಪೆಡ್ಲರ್, ಡೀಲರ್ ಗಳನ್ನು ಮಾತ್ರ ಬಂಧಿಸಿದ್ದರು. ಆದರೆ ಇದೇ ಮೊದಲ ಬಾರಿಗೆ ಸಿಂಥೆಟಿಕ್ ಡ್ರಗ್ಸ್ ಫ್ಯಾಕ್ಟರಿ ಪತ್ತೆಯಾಗಿದೆ. ನಗರದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮಾದಕ ದ್ರವ್ಯಗಳನ್ನು ತಯಾರಿಸುತ್ತಿದ್ದ ಬಾಡಿಗೆ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು,
ನೈಜೀರಿಯಾ ಮೂಲದ ಜಾನ್ ನನ್ನು ಬಂಧಿಸಿದ್ದಾರೆ.

ಐದು ಮಾದರಿಯ ವಿವಿಧ ಕೆಮಿಕಲ್ ಬಳಸಿ ಡ್ರಗ್ಸ್ ತಯಾರು ಮಾಡುತ್ತಿದ್ದ. ಡ್ರಗ್ಸ್ ತಯಾರು ಮಾಡಿ ಬೆಂಗಳೂರು ಸೇರಿದಂತೆ ಬೇರೆ ಬೇರೆ ರಾಜ್ಯ ಹಾಗೂ ಬೇರೆ ದೇಶಕ್ಕೂ ರವಾನೆ ಮಾಡುತ್ತಿದ್ದರು. ದಾಳಿ ವೇಳೆ ಎಂಡಿಎಂಎ ಕ್ರಿಸ್ಟಲ್ ಎಂಬ ಉತ್ತಮ ಕ್ವಾಲಿಟಿ ಡ್ರಗ್ಸ್ ತಯಾರಿಸುತ್ತಿದ್ದ ಎಂಬುದು ತಿಳಿದುಬಂದಿದೆ.

ವಯಸ್ಸಾದ ದಂಪತಿಗಳ ಬಳಿ ಮನೆ ಬಾಡಿಗೆ ಪಡೆದಿದ್ದ ಜಾನ್ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಸಿಸಿಬಿ ಆಂಟಿ ನಾರ್ಕೊಟಿಕ್ಸ್ ವಿಭಾಗದ ಎಸಿಪಿ ತಂಡ, ಡ್ರಗ್ಸ್ ಫ್ಯಾಕ್ಟರಿ ಮೇಲೆ ದಾಳಿ ಮಾಡಿ 5 ಕೋಟಿ ರೂ. ಮೌಲ್ಯದ ಎಂಡಿಎಂಎ, ಡ್ರಗ್ಸ್ ತಯಾರಿಸಲು ಬಳಸುತ್ತಿದ್ದ ಌಸಿಡ್ ಮತ್ತು ಕೋಟ್ಯಂತರ ಮೌಲ್ಯದ ಕೆಮಿಕಲ್ ಜಪ್ತಿ ಮಾಡಿದ್ದಾರೆ.