ಕಲಬುರಗಿಯಲ್ಲಿ ಲಘು ಭೂಕಂಪನ – ಬೆಚ್ಚಿಬಿದ್ದ ಗ್ರಾಮಸ್ಥರು…

51
firstsuddi

ಕಲಬುರಗಿ : ಜಿಲ್ಲೆಯಲ್ಲಿ ಲಘು ಭೂ ಕಂಪನದ ಅನುಭವವಾಗಿದೆ. ರಾತ್ರಿ 11 ಗಂಟೆ ಸುಮಾರಿಗೆ ಭಾರಿ ಶಬ್ಧದೊಂದಿಗೆ ಭೂಮಿ ಕಂಪಿಸಿದ್ದು, ಭಯಭೀತರಾಗಿ ಗ್ರಾಮಸ್ಥರು ಮನೆಯಿಂದ ಹೊರಗೆ ಓಡಿಬಂದಿದ್ದಾರೆ.

ಚಿಂಚೋಳಿ ತಾಲೂಕಿನ ಚಿಮ್ಮಾಇದ್ಲಾಯಿ, ದಸ್ತಾಪುರ, ಐಪಿ ಹೋಸಳ್ಳಿ ಹಾಗೂ ಸುಲೇಪೆಟ್ ಸೇರಿದಂತೆ ಹಲವೆಡೆ ಕಂಪನದ ಅನುಭವವಾಗಿದ್ದು, ಭಾರಿ ಶಬ್ಧದಿಂದಾಗಿ ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ವಿಜಯಪುರ ಜಿಲ್ಲೆಯಲ್ಲೂ ನಿನ್ನೆ ರಾತ್ರಿ 8.51 ಸುಮಾರಿಗೆ ಮತ್ತು ಮಧ್ಯರಾತ್ರಿ 2.18ಕ್ಕೆ ಭೂಮಿ ಕಂಪಿಸಿದ್ದು, 3.9 ತೀವ್ರತೆ ರಿಕ್ಟರ್ ಮಾಪನದಲ್ಲಿ ದಾಖಲಾಗಿದೆ. ವಿಜಯಪುರ ತಾಲೂಕಿನ ಹೊನ್ನುಟಗಿ ಹಾಗೂ ಸುತ್ತಮುತ್ತಲೂ ಭೂಂಕಪನ ದೃಢವಾಗಿದ್ದು, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರದಿಂದ ಅಧಿಕೃತ ಮಾಹಿತಿ ನೀಡಲಾಗಿದೆ.