ಕಳಸ : ಕತ್ತಲಲ್ಲಿ ಜೀವನ ನಡೆಸುತ್ತಿದ್ದ ಮನೆಗೆ ಸೋಲಾರ್ ಬೆಳಕು ನೀಡಿ ದೀಪಾವಳಿ ಆಚರಿಸಿದ ಮನ್ವಂತರ ಬಳಗದ ಸದಸ್ಯರು…

328
firstsuddi

ಕಳಸ : ವಿದ್ಯುತ್ ಬೆಳಕಿಲ್ಲದೆ ಕತ್ತಲಲ್ಲಿ ಜೀವನ ನಡೆಸುತ್ತಿದ್ದ ಮನೆಗೆ ಸೋಲಾರ್ ಬೆಳಕು ನೀಡಿ ಕಳಸ ಮನ್ವಂತರ ಬಳಗದ ಸದಸ್ಯರು ದೀಪಾವಳಿ ಆಚರಿಸಿದರು.
ನಾಯಿ, ಮೊಲ, ಬೆಕ್ಕು ಮುಂತಾದ ನೂರಾರು ಸಾಕು ಪ್ರಾಣಿಗಳನ್ನು ಮತ್ತು ಹಂದಿ, ಜಿಂಕೆಯಂತ ಕಾಡು ಪ್ರಾಣಿಗಳಿಗೆ ಆಹಾರ ನೀಡಿ ಸಾಕಿ ಸಲಹುತ್ತಿದ್ದ ಕುದುರೆಮುಖದ ರೂಬನ್ ಅತ್ಯಂತ ಸಂಕಷ್ಟ ಪರಿಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದರು.
ಕೊರೋನದಿಂದ ಯಾವುದೇ ಆರ್ಥಿಕ ವ್ಯವಸ್ಥೆಯಿಂದ ಅನಾರೋಗ್ಯದ ಮದ್ಯೆ ಶಿಥಿಲಗೊಂಡಿರುವ,ನೀರು,ವಿದ್ಯುತ್ ಯಾವುದೇ ಮೂಲಭೂತ ಸೌಲಭ್ಯಗಳೂ ಇಲ್ಲದೆ ಇರುವ ತನ್ನ ಮನೆಯಲ್ಲಿ ಪ್ರಾಣಿಗಳಿಗಾಗಿ ತನ್ನ ಜೀವನವನ್ನೆ ಮುಡಿಪಾಗಿಟ್ಟುಕೊಂಡು ದಿನಕ್ಕೆ ಸಾವಿರಾರು ರೂಪೈಯ ತಿಂಡಿ ತಿನಸುಗಳನ್ನು ತಂದು ತಾನು ಏನೂ ತಿನ್ನದೆ ಪ್ರಾಣಿಗಳ ಹೊಟ್ಟೆ ತುಂಬಿಸುತ್ತಿದ್ದ.
ಇವರ ಈ ಪರಿಸ್ಥಿತಿಯನ್ನು ಗಮನಿಸಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಡಾ|ರಾಜ್ ಕುಮಾರ್ ಅಭಿಮಾನಿ ಸಂಘದ ಸದಸ್ಯರು ಸಹಾಯವನ್ನು ಮಾಡಿದ್ದರು.
ಆದರೆ ಮನ್ವಂತರ ಬಳಗ ಪವರ್ ಪಾಯಿಂಟ್ ಸಹಯೋಗದೊಂದಿಗೆ ರೂಬನ್ ಮನೆಗೆ ತೆರಳಿ ಮನೆಗೆ ಸೋಲರ್ ದೀಪವನ್ನು ಅಳವಡಿಸಿ ಮನೆಯನ್ನು ಬೆಳಗಿಸಿ ದೀಪಾವಳಿಯನ್ನು ಆಚರಿಸಿದರು.
ಈ ಸಂದರ್ಭದಲ್ಲಿ ಬಳಗದ ಸದಸ್ಯರಾದ ಪ್ರಶಾಂತ್, ಶ್ರೀಕಾಂತ್, ಮುರುಳಿ, ಸುಮಂತ್, ಅಭಿ, ಸುರೇಂದ್ರ, ಜಾಬಿರ್, ವಿಘರಾಜ್, ಸಂತೋಷ್, ಅಕ್ಷಯ್, ಇತರರು ಇದ್ದರು.