ಸುಮಲತಾ ಅವರು ನಾಗರ ಹಾವು ಸಿನಿಮಾದ ಜಲೀಲನ ಪಾತ್ರ ನೆನಪಿಸಿಕೊಂಡು ಪೇಟೆ ರೌಡಿ ಎಂದು ಹೇಳಿರಬೇಕು : ಪ್ರತಾಪ್ ಸಿಂಹ.

176
firstsuddi

ಮೈಸೂರು : ಸಂಸದೆ ಸುಮಲತಾ ಅವರು ನಾಗರಹಾವು ಸಿನಿಮಾದ ಜಲೀಲನ ಪಾತ್ರ ನೆನಪಿಸಿಕೊಂಡು ನನಗೆ ಪೇಟೆ ರೌಡಿ ಎಂದು ಹೇಳಿರಬೇಕು ಎಂದು ಸಂಸದ ಪ್ರತಾಪ್ ಸಿಂಹ ಅವರು ಸಂಸದೆ ಸುಮಲತಾ ಅಂಬರೀಷ್ ಅವರ ವಿರುದ್ಧ ಕಿಡಿಕಾರಿದ್ದಾರೆ. ಸುಮಲತಾ ಅಂಬರೀಷ್ ತಮ್ಮ ಕ್ಷೇತ್ರದಲ್ಲಿ ಯಾವುದೇ ಕೆಲಸ ಮಾಡುತ್ತಿಲ್ಲ. ಎಲ್ಲಾ ಕೆಲಸಗಳನ್ನು ನನಗೆ ಹೇಳಿ ಎಂದು ಪ್ರತಾಪ್ ಸಿಂಹ ಅವರು ಅಧಿಕಾರಿಗಳೊಂದಿಗೆ ಚರ್ಚಿಸಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಸುಮಲತಾ ಅವರು ಪ್ರತಾಪ್ ಸಿಂಹ ಓರ್ವ ಪೇಟೆ ರೌಡಿ ಎಂದು ಹೇಳಿದ್ದರು. ಇದೀಗ ಈ ಹೇಳಿಕೆ ಪ್ರತಾಪ್ ಸಿಂಹ ಅವರು ಪ್ರತಿಕ್ರಯಿಸಿದ್ದು, ಸಂಸದೆ ಸುಮಲತಾ ಅಂಬರೀಷ್ ಅವರು ನನಗೆ ಪೇಟೆ ರೌಡಿ ಎಂದು ಹೇಳಿದ್ದಾರೆ ಎಂದರೆ ನಂಬಿಕೆ ಬರುತ್ತಾ ಇಲ್ಲ, ಒಂದು ವೇಳೆ ಹೇಳಿದ್ದರೂ ನಾಗರ ಹಾವು ಸಿನಿಮಾದ ಜಲೀಲನ ಪಾತ್ರ ನೆನಪಿಸಿಕೊಂಡು ಅವರು ಈ ರೀತಿ ಹೇಳಿರಬೇಕು. ಮೊದಲೇ ಅವರು ಸಿನಿಮಾದವರು. ಇದರಿಂದಾಗಿ ಸುಮಲತಾ ಅವರ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿಲ್ಲ ಎಂದು ಆಕ್ರೋಶ ಹೊರಹಾಕಿದರು.