ಕಳಸ : ಬೋವಿಪಾಲ್ ನಿವಾಸಿ ಕುಮಾರಿ ಸುಪ್ರಿತ ಕೆ.ಎನ್ ಇವರಿಗೆ ಕನ್ನಡ ವಿಶ್ವವಿದ್ಯಾಲಯ ಹಂಪಿ, ಪಿ.ಎಚ್.ಡಿ ಪದವಿ ನೀಡಿದೆ.
ಕಳಸ ಪ್ರಥಮ ಧರ್ಜೆ ಕಾಲೇಜಿನಲ್ಲಿ ವ್ಯಾಸಾಂಗ ಮಾಡಿದ್ದ ಇವರು ಕಳಸ ಪರಿಸರದ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ಎಂಬ ವಿಷಯ ಕುರಿತು ಡಾ.ಸಿ.ಮಹದೇವ ಅವರ ಮಾರ್ಗದರ್ಶನದಲ್ಲಿ ಅಧ್ಯಯನ ನಡೆಸಿ ಕನ್ನಡ ವಿಶ್ವವಿದ್ಯಾಲಯ, ಹಂಪಿಯ ಸಮಾಜ ವಿಜ್ಞಾನಗಳ ನಿಕಾಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗಕ್ಕೆ ಸಲ್ಲಿಸಿದ ಪಿ.ಎಚ್.ಡಿ ಮಹಾ ಪ್ರಬಂದಕ್ಕೆ ನಡೆದ ಪರೀಕ್ಷೆ ಮತ್ತು ಪರೀಕ್ಷಾ ಮಂಡಳಿಯ ಶಿಪಾರಸ್ಸಿನ ಮೇರೆಗೆ ಪದವಿ ನೀಡಲಾಗಿದೆ.
ಸುಪ್ರೀತ ಇವರು ದಾಕ್ಷಾಯಿಣಿ ಮತ್ತು ನಾಗೇಶ್ ಅವರ ಮಗಳಾಗಿದ್ದಾರೆ.










