ಮೂಡಿಗೆರೆ: ಹೊರನಾಡಿನ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಮುನ್ನೂರು ಪಾಲಿನ ಮಹಾಲಕ್ಷ್ಮಿ ದೇವಸ್ಥಾನದ ಪರವಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಳಿಗೆಗಳನ್ನು ನೀಡಲಾಯಿತು. ಮುನ್ನೂರುಪಾಲಿನ ದೇವಸ್ಥಾನವು ಕೊರೋನಾ ವಾಟ್ಸಪ್ ಗುಂಪಿನ ಸಹಯೋಗದಲ್ಲಿ ಈ ಗುಳಿಗೆಗಳನ್ನು ಹಂಚುತ್ತಿದ್ದು ಇಲ್ಲಿಯವರೆಗೂ 35ಸಾವಿರ ಮಂದಿಗೆ ತಾಲ್ಲೂಕಿನಾದ್ಯಂತ ವಿತರಣೆ ಮಾಡಲಾಗಿದೆ.
ಹೊರನಾಡಿನ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ತೆರಳಿದ ಭಾರತೀಪುರ ಪ್ರಮೊದ್, ಅಂಬಿನಕುಡಿಗೆ ಸತೀಶ್‍ಚಂದ್ರ ಹಾಗೂ ಸುದೀಶ್ ಸುವರ್ಣ ಅವರುಗಳು, ದೇವಸ್ಥಾನದ ಮುಖ್ಯಸ್ಥ ಜಿ.ಭೀಮೇಶ್ವರ ಜೋಷಿ ಅವರಿಗೆ ಹೊರನಾಡು ಗ್ರಾಮಕ್ಕೆ 5 ಸಾವಿರ ಜನಗಳಿಗೆ ಅವಶ್ಯವಿರುವಷ್ಟು ಗುಳಿಗೆಗಳನ್ನು ಹಸ್ತಾಂತರಿಸಿದರು. ರೊಟರಿ ಸಮುದಾಯ ದಳ ಹೊರನಾಡು ಹಾಗೂ ಬಲಿಗೆ ಗ್ರಾಮಗಳಲ್ಲಿ ಈ ಗುಳಿಗೆಗಳನ್ನು ವಿತರಣೆ ಮಾಡುವ ಹೊಣೆ ಹೊತ್ತಿದೆ. ದಳದ ಅಧ್ಯಕ್ಷ ಅಣ್ಣಯ್ಯ, ರಾಜಲಕ್ಷ್ಮಿ ಜೋಷಿ, ಸದಸ್ಯರುಗಳಾದ ದಿವಾಕರ ಭಟ್, ಅಶೋಕ್ ಜೈನ್, ರಾಘವೇಂದ್ರ, ಶ್ರೇಣಿಕ್ ಹಾಗೂ ನಾಗಕುಮಾರ್ ಅವರುಗಳು ಈ ಸಂದರ್ಭದಲ್ಲಿ ಇದ್ದರು.










