ಮೂಡಿಗೆರೆ :ಸುಂಕಸಾಲೆ ಪಂಚಾಯಿತಿಯಲ್ಲಿ ಇಂದು ನಡೆದ ಗ್ರಾಮ ಸಭೆಯಲ್ಲಿ ಕಸ್ತೂರಿ ರಂಗನ್ ವರದಿ ಜಾರಿ ಯನ್ನು ವಿರೋಧಿಸಿ ಹಾಗೂ ಅರಣ್ಯ ಒತ್ತುವರಿ ತೆರವುಗೊಳಿಸುವ ಬಗ್ಗೆ ವಿರೋಧಿಸಿ ನಿರ್ಣಯ ಕೈಗೊಳ್ಳಲಾಗಿದ್ದು
ಮಲೆನಾಡು ಬಾಗದಲ್ಲಿ ಹತ್ತಾರು ವರ್ಷಗಳಿಂದ ಜನಜಾನುವಾರುಗಳೊಂದಿಗೆ ಜೀವನ ನಡೆಸುತ್ತಿರುವ ಕೃಷಿಕರು ಹಾಗೂ ಕೃಷಿ ಕಾರ್ಮಿಕರು ಕಸ್ತೂರಿ ರಂಗನ್ ವರದಿ ಜಾರಿಯಾದಲ್ಲಿ ತೀವ್ರ ಸಂಕಷ್ಟಕ್ಕೆ ಒಳಗಾಗುವ ನಿಮಿತ್ತ ಈ ಹಿಂದೆ ಚುನಾವಣಾ ಬಹಿಷ್ಕಾರ ಮಾಡಿ ಕಸ್ತೂರಿ ರಂಗನ್ ವರದಿಯ ಜಾರಿಯನ್ನು ತಡೆಹಿಡಿಯಲಾಗಿದ್ದರು ಈಗ ಕೇಂದ್ರ ಪರಿಸರ ಇಲಾಖೆಯವರು ವರದಿ ಜಾರಿಯ ಬಗ್ಗೆ ಸೂಚನೆಗಳನ್ನ ನೀಡಿದ್ದು ಈ ಬಗ್ಗೆ ಗ್ರಾಮ ಸಭೆಯಲ್ಲಿ ವರದಿ ಜಾರಿಯಾದಲ್ಲಿ ಸುಂಕಸಾಲೆ ಗ್ರಾಮ ಪಂಚಾಯಿತಿಯ ಸರ್ವ ಸದಸ್ಯರು ರಾಜೀನಾಮೆ ನೀಡುವುದಾಗಿ ಘೋಷಿಸಿರುತ್ತಾರೆ ಹಾಗೂ ಗ್ರಾಮ ಸಭೆಯು ವರದಿ ಜಾರಿಯನ್ನು ಸರ್ವಾನುಮತದಿಂದ ವಿರೋಧಿಸಿ ನಿರ್ಣಯ ಕೈಗೊಂಡಿರುತ್ತದೆ ಹಾಗೂ ಹತ್ತಾರು ವರ್ಷಗಳಿಂದ ಅರಣ್ಯ ಹಾಗೂ ಕಂದಾಯ ಭೂಮಿಯಲ್ಲಿ ಒತ್ತುವರಿ ಮಾಡಿ ಕೃಷಿ ಸಾಗುವಳಿ ಮಾಡಿರುವ ಕೃಷಿಕರಿಗೆ ಸರ್ಕಾರವು ಪುನರ್ ಪರಿಶೀಲಿಸಿ ನ್ಯಾಯಯುತ ಪರಿಹಾರ ಕಲ್ಪಿಸುವವರೆಗೆ ಒತ್ತುವರಿ ತೆರವನ್ನು ತಡೆಹಿಡಿಯಬೇಕೆಂದು ಗ್ರಾಮ ಸಭೆಯು ನಿರ್ಣಯ ಕೈಗೊಂಡಿರುತ್ತದೆ ಈ ಸಭೆಯಲ್ಲಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಹಾಗೂ ಊರಿನ ಎಲ್ಲಾ ಪಕ್ಷದ ಮುಖಂಡರುಗಳು ಗ್ರಾಮಸ್ಥರುಗಳು ಹಾಜರಿದ್ದರು
Home ಸ್ಥಳಿಯ ಸುದ್ದಿ ಕಸ್ತೂರಿ ರಂಗನ್ ವರದಿ ಜಾರಿಯಾದರೆ ಸಾಮೂಹಿಕ ರಾಜೀನಾಮೆಗೆ ಸುಂಕಸಾಲೆ ಗ್ರಾಮ ಪಂಚಾಯತ್ ಅಧ್ಯಕ್ಷರು ಸದಸ್ಯರು ನಿರ್ಧಾರ…










