ಕಾಂಗ್ರೆಸ್​ನಲ್ಲಿ ಭಿನ್ನಮತ ಸ್ಫೋಟ – ಮೋಟಮ್ಮ ಪುತ್ರಿಗೆ ಟಿಕೆಟ್ ಕೊಡದಂತೆ ಮುಖಂಡರ ಬಹಿರಂಗ ಸಭೆ…

156
firstsuddi

ಮೂಡಿಗೆರೆ : ವಿಧಾನಸಭಾ ಚುನಾವಣೆಗೆ ಆರು ತಿಂಗಳು ಇರುವಾಗಲೇ ಮೂಡಿಗೆರೆ ಕಾಂಗ್ರೆಸ್ ಘಟಕದಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಮೂಡಿಗೆರೆ ವಿಧಾನಸಭಾ ಕ್ಷೇತ್ರದ ವಸ್ತಾರೆ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಮುಖಂಡರ ಬಹಿರಂಗ ಸಭೆಯಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಯನಾಗೆ ಟಿಕೆಟ್ ನೀಡಬಾರದು ಎಂದು ಮುಖಂಡರು ಆಗ್ರಹಿಸಿದರು.

ಮೋಟಮ್ಮ ಅವರನ್ನೇ ಕ್ಷೇತ್ರದ ಜನರು ಒಪ್ಪುತ್ತಿಲ್ಲ, ಇನ್ನು ನಯನ ಅವರನ್ನು ಒಪ್ಪುವುದು ದೂರದ ಮಾತು. ಕ್ಷೇತ್ರದಲ್ಲಿ ಐದು ಬಾರಿ ಸೋಲು ಕಂಡಿರುವ ಮೋಟಮ್ಮ ನಾನು ರಾಜಕೀಯದಿಂದ ನಿವೃತ್ತಿಯಾಗಿದ್ದೇನೆ ಎಂದಿದ್ದಾರೆ. ಅವರ ಮಗಳಿಗೆ ಟಿಕೆಟ್ ನೀಡಿದರೆ ಕಾಂಗ್ರೆಸ್ ಪಕ್ಷ ಸೋಲುವುದು ಗ್ಯಾರಂಟಿ. ಹಾಗಾಗಿ ಸ್ಥಳೀಯರು ಹಾಗೂ ಹೊಸ ಮುಖಕ್ಕೆ ಟಿಕೆಟ್ ನೀಡುವಂತೆ ಕಾರ್ಯಕರ್ತರು ಒತ್ತಾಯಿಸಿದರು.

ಕಳೆದೊಂದು ವಾರದ ಹಿಂದೆ ಕಾಂಗ್ರೆಸ್ ಕಾರ್ಯಕರ್ತರು ಮೂಡಿಗೆರೆಯಲ್ಲೂ ಸಭೆ ಸೇರಿ ಅಸಮಾಧಾನ ಹೊರಹಾಕಿದ್ದರು. ಮುಂದಿನ ವಾರದಲ್ಲಿ ಗೋಣಿಬೀಡು ಹೋಬಳಿಯಲ್ಲೂ ಸಭೆ ಸೇರುವುದಾಗಿ ತೀರ್ಮಾನಿಸಿದ್ದಾರೆ. ನಯನಾ ವಿರುದ್ಧ ಕಾಂಗ್ರೆಸ್ ಹೋಬಳಿಗಳಿಗೆ ಹೋಗಿ ಸಭೆ ನಡೆಸಿ ಅಸಮಾಧಾನ ಹೊರಹಾಕುತ್ತಿದ್ದಾರೆ. ನಯನಾಗೆ ಟಿಕೆಟ್ ನೀಡದಂತೆ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರಿಗೂ ಮನವಿ ಮಾಡಲು ನಿರ್ಧರಿಸಿದ್ದಾರೆ.